ETV Bharat / state

ಮಾನ, ಮರ್ಯಾದೆ ಇಲ್ದೇ ಇರೋರು ಕ್ಷಮೆ ಕೇಳಲ್ಲ: ಜಮೀರ್​​​ ವಾಗ್ದಾಳಿ - ಶಾಸಕ ಸೋಮಶೇಖರರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಜಮೀರ್

ಮುಂದಿನ ಹತ್ತು‌ ದಿನದೊಳಗೆ ಶಾಸಕ ಸೋಮಶೇಖರ ರೆಡ್ಡಿ ಅವರನ್ನ ಬಂಧಿಸಬೇಕು.‌ಇಲ್ಲವಾದ್ರೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುತ್ತೇವೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

MLA Jameer Ahamad
ಶಾಸಕ ಜಮೀರ್ ಅಹಮ್ಮದ್ ಖಾನ್
author img

By

Published : Jan 13, 2020, 2:58 PM IST

ಬಳ್ಳಾರಿ: ಪ್ರಚೋದನಕಾರಿ ಭಾಷಣದ ಆರೋಪ ಹೊತ್ತಿರುವ ಶಾಸಕ ಸೋಮಶೇಖರ ರೆಡ್ಡಿಯವ್ರಿಗೆ ಮಾನ, ಮರ್ಯಾದೆ ಇಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.

ಶಾಸಕ ಜಮೀರ್ ಅಹಮ್ಮದ್ ಖಾನ್

ಜಿಲ್ಲೆಯ ಸಂಡೂರು ತಾಲೂಕಿನ‌ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿಂದು ಮುಂಜಾಗ್ರತ ಕ್ರಮವಾಗಿ ಬಂಧಿಸಿದ್ದ ಜಿಲ್ಲಾ ಪೊಲೀಸರು, ಜಮೀರ್​ ಅವರನ್ನು ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಹತ್ತು‌ ದಿನದೊಳಗೆ ಶಾಸಕ ಸೋಮಶೇಖರ ರೆಡ್ಡಿ ಅವರನ್ನ ಬಂಧಿಸಬೇಕು.‌ ಇಲ್ಲವಾದ್ರೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಅವರಿಗೆ ಮಾನ, ಮರ್ಯಾದೆ ಇಲ್ಲ. ಆ ಎರಡು ಇದ್ದವರು ಕ್ಷಮೆ ಕೇಳುತ್ತಾರೆ. ಕ್ಷಮೆ ಕೇಳೋದಕ್ಕೆ ಮುಂಚೆ ಅವರನ್ನ ಬಂಧಿಸಬೇಕು. ಬಳ್ಳಾರಿ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಹೀಗಾಗಿ, ಅವರನ್ನ ಕೂಡಲೇ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರಿಗೆ ಮನವಿ ಮಾಡಿರುವೆ. ಅವರೇನಾದ್ರೂ ಬಂಧಿಸದೇ ಹೋದ್ರೆ ಉಗ್ರ ಹೋರಾಟ ನಡೆಸಲು ನಿರ್ಧರಿಸುವೆ. ನಮ್ಮ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಇಲ್ಲಿಗೆ ಬಂದು ಪ್ರತಿಭಟನೆ ನಡೆಸಲಾಗುವುದು ಎಂದರು.

ನಾನು ಈ‌‌ ದಿನ ಬಳ್ಳಾರಿಗೆ ಬರುವುದಾಗಿ ತಿಳಿಸಿದ್ದೆ.‌ ಅದರಂತೆ ಬಂದಿದ್ದೇನೆ. ಶಾಂತಿ ಕದಡುವ ನೆಪವೊಡ್ಡಿ ನನ್ನನ್ನ ಕುಡಿತಿನಿ ಬಳಿಯ ವೇಣಿ ವೀರಾಪುರ ಬಳಿ ಬಂಧಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದರು.

Intro:ಸೋಮಶೇಖರರೆಡ್ಡಿಗೆ ಮಾನ, ಮರ್ಯಾದೇನೇ ಇಲ್ಲ: ಶಾಸಕ ಜಮೀರ್ ವಾಗ್ದಾಳಿ
ಬಳ್ಳಾರಿ: ಪ್ರಚೋದನಕಾರಿ ಭಾಷಣದ ಆರೋಪ ಹೊತ್ತಿರುವ ಶಾಸಕ ಸೋಮಶೇಖರರೆಡ್ಡಿಯವ್ರಿಗೆ ಮಾನ, ಮರ್ಯಾದೇನೇ ಇಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ‌ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿಂದು ಮುಂಜಾಗ್ರತೆ ಕ್ರಮವಾಗಿ ಬಂಧಿಸಿದ್ದ ಜಿಲ್ಲಾ ಪೊಲೀಸರು ಅವರನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಂದಿನ ಹತ್ತು‌ದಿನದೊಳಗೆ ಶಾಸಕ ಸೋಮಶೇಖರರೆಡ್ಡಿ ಅವರನ್ನ ಬಂಧಿಸಬೇಕು.‌ಇಲ್ಲವಾದ್ರೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ
ಶಾಸಕ ಜಮೀರ್ ಅಹಮ್ಮದ್ ಖಾನ್.
ರೆಡ್ಡಿಗೆ ಮಾನ, ಮರ್ಯಾದೇನೇ ಇಲ್ಲ. ಆ ಎರಡು ಇದ್ದವರು ಕ್ಷಮೆ ಕೇಳುತ್ತಾರೆ. ಕ್ಷಮೆ ಕೇಳೋದಕ್ಕೆ ಮುಂಚೆ ಅವರನ್ನ ಬಂಧಿ ಸಬೇಕೆಂದ್ರು. ಬಳ್ಳಾರಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಹೀಗಾಗಿ, ಅವರನ್ನ ಕೂಡಲೇ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರಿಗೆ ತಾಕೀತು ಮಾಡಿರುವೆ. ಅವರೇನಾದ್ರೂ ಬಂಧಿಸದೇ ಹೋದ್ರೆ ನಾವ್ ಉಗ್ರ ಹೋರಾಟ ನಡೆಸಲು ನಿರ್ಧರಿಸುವೆ. ಸಿಎಲ್ ಪಿ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಇಲ್ಲಿಗೆ ಬಂದು ಪ್ರತಿಭಟನೆ ನಡೆಸಲಾಗುವುದು ಎಂದ್ರು.

Body:ನಾನು ಈ‌‌ ದಿನ ಬಳ್ಳಾರಿಗೆ ಬರುವುದಾಗಿ ತಿಳಿಸಿದ್ದೆ.‌ ಅದರಂತೆ ಬಂದಿದ್ದೇನೆ. ಶಾಂತಿ ಕದಡುವ ನೆಪವೊಡ್ಡಿ ನನ್ನನ್ನ ಕುಡಿತಿನಿ ಬಳಿಯ ವೇಣಿ ವೀರಾಪುರ ಬಳಿ ನನ್ನನ್ನ ಬಂಧಿಸಿ ಇಲ್ಲಿಗೆ ಕರೆದು ಕೊಂಡು ಬಂದಿದ್ದಾರೆ. ಈಗ ಸ್ಟೇಷನ್ ಬೇಲ್ ಬಿಡುಗಡೆ ಮಾಡಿದ್ದಾರೆ. ಬಳ್ಳಾರಿಗೆ ಬಂದೀನಿ ಬಾರೋ ರೆಡ್ಡಿ. ಅದೇನ್ ಊಫ್ ಅಂತಾ ಊದಿದ್ರೆ ಹೋಗ್ತೀರಾ ಅಂತ ಹೇಳಿದ್ದೀಯಾ ಅಲ್ಲ. ಖಡ್ಗ ಹಿಡಿದುಕೊಂಡು ಬಾರೋ ರೆಡ್ಡಿ ಎಂದು ಏಕ ವಚನದಲ್ಲೇ ಕರೆದ್ರು ಶಾಸಕ ಜಮೀರ್.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_MLA_JAMEER_AHAMAD_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.