ಬಳ್ಳಾರಿ: ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಇಂದು ನಗರದ 18ನೇ ವಾರ್ಡ್ ಸತ್ಯನಾರಾಯಣ ಪೇಟೆ ಮತ್ತು ರಾಘವೇಂದ್ರ ಕಾಲೋನಿ, 19ನೇ ವಾರ್ಡ್ ಸಣ್ಣ ದುರ್ಗಮ್ಮ ಗುಡಿ ಪ್ರದೇಶಗಳಿಗೆ ಭೇಟಿ ನೀಡಿ, ಕುಡಿಯುವ ನೀರಿನ ಸರಬರಾಜಿನ ಕುರಿತು ಪರೀಶಿಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಪ್ರತಿನಿತ್ಯ ಒಂದು ತಾಸು ನೀರು ಕೊಡುತ್ತೇವೆ. ಹಾಗೆಯೇ ಕಾಲುವೆಗಳಿಗೆ ನೀರು ಬಂದ ಮೇಲೆ ಒಂದು ದಿನಕ್ಕೆ ಎರಡು ತಾಸು ಬೆಳಗ್ಗೆ ಮತ್ತು ಸಂಜೆ ನೀರು ಕೊಡುತ್ತೇವೆ ಎಂದು ಹೇಳಿದರು.
ಈ ವೇಳೆ ಕೆಲ ಸಾರ್ವಜನಿಕರು ಸರಿಯಾಗಿ ಕುಡಿಯುವ ನೀರು ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಕುಡಿಯುವ ನೀರಿನ ಸಣ್ಣಪುಟ್ಟ ತೊಂದರೆಗಳನ್ನು ಕೂಡಲೇ ಬಗೆಹರಿಸಬೇಕು. ಹಾಗೇ ಕೆಲಸ ಮುಗಿಸಿದ ವರದಿ ಕೊಡಬೇಕು ಎಂದು ಸೂಚಿಸಿದರು.