ಬಳ್ಳಾರಿ : ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿರುವುದರಿಂದ ಐಎಲ್ಐ (ಇನ್ಪ್ಲೂಯಾಂಜಾ ಲೈ ಇನ್ಫೆಕ್ಷನ್)ರೋಗದ ಗುಣಲಕ್ಷಣಗಳು ಹೆಚ್ಚಾಗಿ ಕಂಡು ಬರುವ ಸಾಧ್ಯತೆಯಿದೆ, ಅವುಗಳನ್ನು ಪ್ರತ್ಯೇಕಗೊಳಸಿ ವಿಶೇಷ ಕಾಳಜಿ ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದರು.
ವಿಮ್ಸ್ ಆಸ್ಪತ್ರೆಯ ನಿರ್ದೇಶಕರ ಕಚೇರಿ ಭೇಟಿಗೂ ಮುನ್ನ ಮಾತನಾಡಿದ ಅವರು, ಈಗಾಗಲೇ ಮುಂಗಾರು ಮಳೆ ಶುರುವಾಗಿದೆ. ಐಎಲ್ಐ ಕೇಸ್ಗಳು ಹೆಚ್ಚಾಗಿ ಪತ್ತೆಯಾಗಲಿವೆ. ನಿನ್ನೆ ಬೆಂಗಳೂರಿನಲ್ಲಿ ಸಾವಿಗೀಡಾದ ಮೂವರು ಕೂಡ ಐಎಲ್ಐ (ಇತರ ಕಾಯಿಲೆಗಳಿಂದ ಸೋಂಕಿಗೆ ಒಳಗಾದವರು) ರೋಗದ ಗುಣಲಕ್ಷಣಗಳಿರುವವರೇ ಆಗಿದ್ದರು ಎಂದರು.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆಗಸ್ಟ್ 15 ರ ನಂತರ ರಾಜ್ಯದಲ್ಲಿ ಕೊರೊನಾ ಸರ್ಜಿಕಲ್ ಆಗುತ್ತೆ ಎಂದು ವೈದ್ಯಕೀಯ ಪರಿಣತರು ಹೇಳಿದ್ದಾರೆ. ನಾವೆಲ್ಲ ಅದನ್ನು ಸಮರ್ಥವಾಗಿ ಎದುರಿಸಲು ಸಕಲ ತಯಾರಿ ನಡೆಸಿಕೊಳ್ಳಬೇಕಿದೆ ಎಂದರು.
ಕೊರೊನಾ ಸೋಂಕು ಇರುವ ಶೇಕಡಾ 50 ರಷ್ಟು ಮಂದಿ ಈ ಐಎಲ್ಐ ರೋಗದ ಗುಣ ಲಕ್ಷಣ ಹೊಂದಿದವರೇ ಆಗಿದ್ದಾರೆ. ಹೀಗಾಗಿ 60 ವರ್ಷ ವಯೋಮಾನದ ಮೇಲಿನವರು ಕಡ್ಡಾಯವಾಗಿ ಫೀವರ್ ಕ್ಲಿನಿಕ್ಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಉಪಸ್ಥಿತರಿದ್ದರು.