ETV Bharat / state

ಐಸಿಸ್, ತಾಲಿಬಾನ್​ಗೆ​ ಬೆಂಬಲ ಕೊಡುತ್ತೀರಾ, ರಾಜ್ಯದ ಜನರಲ್ಲಿ ಕ್ಷಮೆ ಕೇಳ್ತೀರಾ: ಡಿಕೆಶಿಗೆ ಜೋಷಿ ಪ್ರಶ್ನೆ - ಈಟಿವಿ ಭಾರತ ಕನ್ನಡ

ಮಂಗಳೂರು ಕುಕ್ಕರ್​ ಬಾಂಬ್​ ಸ್ಪೋಟ ಪ್ರಕರಣ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಲ್ಹಾದ ಜೋಷಿ ​

minister-pralhad-joshi-slams-kpcc-president-dk-shivakumar
ಐಸಿಸ್, ತಾಲಿಬಾನ್​ಗೆ​ ಬೆಂಬಲ ಕೊಡುತ್ತೀರಾ, ರಾಜ್ಯದ ಜನರಲ್ಲಿ ಕ್ಷಮೆ ಕೇಳ್ತೀರಾ : ಡಿಕೆಶಿಗೆ ಜೋಷಿ ಪ್ರಶ್ನೆ
author img

By

Published : Mar 6, 2023, 7:48 PM IST

Updated : Mar 6, 2023, 8:34 PM IST

ಐಸಿಸ್, ತಾಲಿಬಾನ್​ಗೆ​ ಬೆಂಬಲ ಕೊಡುತ್ತೀರಾ, ರಾಜ್ಯದ ಜನರಲ್ಲಿ ಕ್ಷಮೆ ಕೇಳ್ತೀರಾ : ಡಿಕೆಶಿಗೆ ಜೋಷಿ ಪ್ರಶ್ನೆ

ವಿಜಯನಗರ : ಮಂಗಳೂರು ಕುಕ್ಕರ್ ಬಾಂಬ್ ಸ್ಟೋಟದ ಹೊಣೆಯನ್ನು ಐಸಿಸ್​ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅಂದು ಈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಈಗ ಐಸಿಸ್​ಗೆ ಬೆಂಬಲ ನೀಡುತ್ತಾರೋ ಅಥವಾ ರಾಜ್ಯದ ಜನರ ಕ್ಷಮೆ ಕೇಳುತ್ತಾರೋ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಷಿ ಪ್ರಶ್ನಿಸಿದ್ದಾರೆ.

ಹೊಸಪೇಟೆ ನಗರದಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಕ್ಕರ್‌ ಬಾಂಬ್‌ ಸ್ಫೋಟ ಅದೊಂದು ಸಾಮಾನ್ಯ ಅಪಘಾತ. ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಈ ರೀತಿ ತಂತ್ರ ಮಾಡುತ್ತಿದೆ ಎಂದು ಶಿವಕುಮಾರ್‌ ಎರಡು ತಿಂಗಳ ಹಿಂದೆ ಹೇಳಿದ್ದರು. ಐಸಿಸ್​ನವರೇ ತಾವು ದಾಳಿ ನಡೆಸಿದಾಗಿ ಒಪ್ಪಿಕೊಂಡಿದ್ದಾರೆ. ಈಗ ಶಿವಕುಮಾರ್ ಅವರೇ ಐಸಿಸ್​,ತಾಲಿಬಾನ್ ಅವರನ್ನು ಬೆಂಬಲಿಸುತ್ತೀರಾ ಅಥವಾ ರಾಜ್ಯದ ಜನರ ಕ್ಷಮೆ ಕೇಳ್ತಿರಾ ಎಂದು ಹೇಳಿದರು. ಇಲ್ಲವಾದಲ್ಲಿ ನೀವು ಐಎಸ್‌ಐಎಸ್‌, ತಾಲಿಬಾನ್‌ ಜೊತೆಗೆ ಇರುವವರು ಎನ್ನುವುದು ಜನ ತೀರ್ಮಾನ ಮಾಡುತ್ತಾರೆ. ಶಿವಕುಮಾರ್‌ ನೀವು ಕ್ಷಮೆ ಕೇಳಿದರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇದ್ದೀರಾ. ಇಲ್ಲದಿದ್ದರೆ ಭಯೋತ್ಪಾದಕರ ಪರ ಇದ್ದೀರಿ ಎಂದರ್ಥ ಎಂದು ಹೇಳಿದರು.

ವಿದೇಶಿ ಶಕ್ತಿಗಳಿಂದ ಕುಕ್ಕರ್​ ಬಾಂಬ್​ ಸ್ಪೋಟ : ಕುಕ್ಕರ್ ಬಾಂಬ್ ಸ್ಟೋಟ ವಿದೇಶಿ ಶಕ್ತಿಗಳಿಂದ ಆಗಿದೆ. ಅದಕ್ಕೆ ಪಾಕಿಸ್ತಾನದ ಬೆಂಬಲ ಇದೆ. ಡಿ.ಕೆ. ಶಿವಕುಮಾರ್‌ ಅವರು ಇದನ್ನು ಸಾಮಾನ್ಯ ಸ್ಫೋಟ ಎಂಬಂತೆ ಮಾತನಾಡುತ್ತಾರೆ ಎಂದರು.

ಇದು ತುಷ್ಟೀಕರಣದ ರಾಜಕಾರಣ. ಹಲವು ವರ್ಷಗಳಿಂದ ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ತುಷ್ಟೀಕರಣ ಮಾಡುತ್ತಾ ಬಂದಿವೆ. ಜಗತ್ತಿನಲ್ಲಿ ಪಾಕಿಸ್ತಾನ ಪ್ರಾಯೋಜಿತ ಸ್ಫೋಟ, ಭಯೋತ್ಪಾದನೆ ನಡೆಯುತ್ತಿದೆ. ಪಾಕಿಸ್ತಾನವನ್ನು ಏಕಾಂಗಿ ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕೆನ್ನುವುದು ಭಾರತದ ನಿಲುವುವಾಗಿದೆ. ಆದರೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ಉತ್ತರಪ್ರದೇಶದಲ್ಲಿ ಹಾಗೂ ನಾನಾ ರಾಜ್ಯಗಳಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆದ್ದಿಲ್ಲ. ಇತ್ತೀಚೆಗೆ ನಡೆದ ಈಶಾನ್ಯ ರಾಜ್ಯಗಳಲ್ಲೂ ಕಾಂಗ್ರೆಸ್​ ತೊಳೆದುಹೋಗಿದೆ. ಈಗ ನೆಲೆ ಇಲ್ಲದಂತಾದರೂ ಕಾಂಗ್ರೆಸ್​ ತುಷ್ಟೀಕರಣದ ರಾಜಕಾರಣ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಲೋಕಾಯುಕ್ತ ತನಿಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಲ್ಲ : ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಸರ್ಕಾರಿ ಅಧಿಕಾರಿ. ಲೋಕಾಯುಕ್ತ ತನಿಖೆಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಭವಿಷ್ಯದಲ್ಲಿ ಮತ್ತೊಬ್ಬರು ಈ ರೀತಿ ಮಾಡಬಾರದು. ಆ ರೀತಿಯ ಕ್ರಮಕೈಗೊಳ್ಳಿ ಎಂದು ಲೋಕಾಯುಕ್ತವನ್ನು ಆಗ್ರಹಿಸಿದ್ದೇವೆ. ಭ್ರಷ್ಟಾಚಾರ ತಡೆಯಲು ಲೋಕಾಯುಕ್ತಕ್ಕೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೇವೆ. ಕಾಂಗ್ರೆಸ್‌ನವರು ಇದನ್ನು ದುರ್ಬಲಗೊಳಿಸಿದ್ದರು. ಹಲ್ಲಿಲ್ಲದ ಹುಲಿ ಎಸಿಬಿ ತಂದಿದ್ದೇ ಕಾಂಗ್ರೆಸ್‌. ಐದು ವರ್ಷ ಭ್ರಷ್ಟಾಚಾರದಿಂದ ಸರ್ಕಾರ ನಡೆಸಿದ್ದರು. ಭ್ರಷ್ಟಾಚಾರದ ಮೊಟ್ಟೆಗಳನ್ನು ಇಟ್ಟು ಪೋಷಿಸಿ, ನೂರಾರು ಮರಿಗಳನ್ನು ಇಟ್ಟು ಅವುಗಳನ್ನು ರಕ್ತಬೀಜಾಸುರಗಳಂತೆ ಬೆಳೆಸಿದ್ದೇ ಕಾಂಗ್ರೆಸ್‌ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಉದ್ಘಾಟನೆ ವಿಚಾರವಾಗಿ ಮಾತನಾಡಿ, ಬೆಳಗಾವಿಯಲ್ಲಿ ಮುಖ್ಯಮಂತ್ರಿಯವರು ಶಿವಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆ ಮಾಡಿದ ನಂತರ ಮತ್ತೊಮ್ಮೆ ಮಾಡಿರುವುದು ಕಾಂಗ್ರೆಸ್ ನ ದುರಹಂಕಾರ ತೋರಿಸುತ್ತದೆ. ಅದಕ್ಕೆ ದುಡ್ಡು ಕೊಟ್ಟಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ಸಿಗರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ಇದನ್ನೂ ಓದಿ : ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ

Last Updated : Mar 6, 2023, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.