ETV Bharat / state

ಗೌರಿ ಗಣೇಶ ಹಬ್ಬಕ್ಕೆ ಅನುಮತಿ ಕುರಿತು ಸಿಎಂ ತೀರ್ಮಾನ ಕೈಗೊಳ್ತಾರೆ: ಸಚಿವ ಪ್ರಭು ಚೌಹಾಣ್​ - Minister prabhu chauhan news

ಸಿಎಂ ಬಸವರಾಜ ಬೊಮ್ಮಾಯಿ ಅವರು ಬುದ್ಧಿವಂತರಿದ್ದಾರೆ. ಅವರು ಎಲ್ಲವನ್ನು ನಿಭಾಯಿಸಲಿದ್ದಾರೆ. ನಾನು ಕೇವಲ ಪಶುಸಂಗೋಪನಾ ಸಚಿವ ಎಂದು ಪ್ರಭು ಚೌಹಾಣ್​ ಹೇಳಿದ್ದಾರೆ.

minister-prabhu-chauhan-talk-about-mysore-gang-rape
ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್​
author img

By

Published : Aug 31, 2021, 4:34 PM IST

Updated : Aug 31, 2021, 5:07 PM IST

ಹೊಸಪೇಟೆ(ವಿಜಯನಗರ): ನಾನು ಪಶುಸಂಗೋಪನಾ ಸಚಿವ.‌ ನನ್ನ ಖಾತೆ ಕುರಿತು ಮಾತನಾಡಿದರೆ ಒಳ್ಳೆಯದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್​ ಹೇಳಿದ್ದಾರೆ.

ತಾಲೂಕಿನ ಮಲಪನಗುಡಿಯ ಗೋ ಶಾಲೆಗೆ ಇಂದು ಭೇಟಿ ನೀಡಿ, ಮಾಧ್ಯಮದವರೊಂದಿಗೆ ಮಾತನಾಡಿದರು. ಗಣೇಶ ಹಬ್ಬದ ಆಚರಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಸಚಿವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಪಶು ಸಂಗೋಪನಾ ಇಲಾಖೆ ಸಂಬಂಧ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

ಸರ್ಕಾರ ಶೇ. 100% ರಷ್ಟು ಟೇಕ್ ಆಫ್​ ಆಗಿದೆ

ಪ್ರತಿ ಪಕ್ಷದವರ ಕೆಲಸ ಅವರು ಮಾಡುತ್ತಾರೆ. ಶೇ. 100% ರಷ್ಟು ಸರ್ಕಾರ ಟೇಕ್ ಆಫ್​ ಆಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್​ ಹೇಳಿದರು.

ನಗರದ ತಾಲೂಕಿನ ಒಳಾಂಗಣ ಕ್ರೀಡಾಂಗಣದಲ್ಲಿಂದು ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಸರ್ಕಾರ ಟೇಕ್ ಆಫ್​ ಆಗಿಲ್ಲ ಎಂದಿದ್ದಕ್ಕೆ ಪ್ರತಿಕ್ರಿಯಿಸಿದರು. ಎಲ್ಲಾ ಸಚಿವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜಿಲ್ಲಾ ಪ್ರವಾಸ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದರು.

minister-prabhu-chauhan-
ಗೋ ಶಾಲೆಗೆ ಭೇಟಿ ನೀಡಿದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್​

ಗೋವುಗಳು ಕಸಾಯಿಖಾನೆಗೆ ಹೋಗಬಾರದೆಂದು ಗೋ ಹತ್ಯೆ ಕಾಯ್ದೆ ಜಾರಿಗೆ ತರಲಾಗಿದೆ.‌ ಕಾಯ್ದೆ ವಿರುದ್ಧ ಮುಸ್ಲಿಂ ಭಾಂಧವರು ಪಿಐಎಲ್(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಹಾಕಿದ್ದಾರೆ. ಹೈ ಕೋರ್ಟ್​ನಲ್ಲಿ ನಮ್ಮ ಪರ ತೀರ್ಪು ಬರಲಿದೆ. ಸಚಿವನಾದ ನಂತರ ಶೇ.10 ರಷ್ಟು ಶಿಕ್ಷಾ ಪ್ರಕರಣಗಳು ಹೆಚ್ಚಳವಾಗಿವೆ ಎಂದು ತಿಳಿಸಿದರು.

ಇಲ್ಲಿವರೆಗೂ 7 ಸಾವಿರ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆಯನ್ನು ತೆರೆಯಲಾಗುವುದು. ಗೋ ಶಾಲೆಗೆ 50 ಲಕ್ಷ ರೂ. ಅನುದಾನ ನೀಡಲು ಸರ್ಕಾರ ಒಪ್ಪಿದೆ. ಪ್ರಾಣಿ ಸಹಾಯವಾಣಿ ಕೇಂದ್ರವನ್ನು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ತಿಂಗಳಿಗೆ 10 ಸಾವಿರ ಕರೆಗಳು ಬಂದಿದ್ದು, ಶೇ. 85 ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪಶು ಸಂಗೋಪನಾ ಇಲಾಖೆಗೆ ಆದಾಯವಿಲ್ಲ. ಹಾಗಾಗಿ, 100 ಎಕರೆಯಲ್ಲಿ ಪಶು ಮೇಳವನ್ನು ಮಾಡಲು ಆಲೋಚಿಸಲಾಗಿದೆ. ವೈದ್ಯರು ಹಾಗೂ ಸಹಾಯಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ಓದಿ: ಹಿಂದೂಗಳ ಮೆಜಾರಿಟಿ ಇದ್ದರೆ, ಸಣ್ಣ ಸಮುದಾಯಗಳು ಸುರಕ್ಷಿತ: ಸಿ.ಟಿ. ರವಿ

Last Updated : Aug 31, 2021, 5:07 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.