ETV Bharat / state

ಹೊಸಪೇಟೆ ಎಂಸಿಎಚ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಆನಂದ ಸಿಂಗ್

ಹೊಸಪೇಟೆಯಲ್ಲಿ ಕೊರೊನಾ ಏಕೆ ನಿಯಂತ್ರಣಕ್ಕೆ ಬರುತ್ತಿಲ್ಲ‌ ಎಂಬುದು ಪರಿಶೀಲನೆ ಮಾಡಲಾಗುತ್ತಿದೆ. ಡಿ ಗ್ರೂಪ್ ಹಾಗೂ ಡಾಕ್ಟರ್​ಗಳ ಕೊರತೆ ಇದೆ. ಹೊಸಪೇಟೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಅಲ್ಲದೇ, ಸದ್ಯ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯನ್ನು ಹಾಕಲಾಗುತ್ತಿದೆ. ಲಸಿಕೆ ಹಾಕುವುದನ್ನು ಸುರಕ್ಷಿತ ಸ್ಥಳದಲ್ಲಿ ನಡೆಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ಆನಂದ ಸಿಂಗ್
ಆನಂದ ಸಿಂಗ್
author img

By

Published : May 8, 2021, 7:55 PM IST

ಹೊಸಪೇಟೆ: ಇಲ್ಲಿನ ಎಂಸಿಎಚ್ ಆಸ್ಪತ್ರೆ ಹಾಗೂ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆಗೆ(ನೂರು ಹಾಸಿಗೆ) ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಭೇಟಿ ನೀಡಿ‌ ಪರಿಶೀಲನೆ‌ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸಪೇಟೆಯಲ್ಲಿ ಕೊರೊನಾ ಏಕೆ ನಿಯಂತ್ರಣಕ್ಕೆ ಬರುತ್ತಿಲ್ಲ‌ ಎಂಬುದು ಪರಿಶೀಲನೆ ಮಾಡಲಾಗುತ್ತಿದೆ. ಡಿ ಗ್ರೂಪ್ ಹಾಗೂ ಡಾಕ್ಟರ್​ಗಳ ಕೊರತೆ ಇದೆ. ಹೊಸಪೇಟೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಅಲ್ಲದೇ, ಸದ್ಯ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕುವುದನ್ನು ಸುರಕ್ಷಿತ ಸ್ಥಳದಲ್ಲಿ ನಡೆಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆನಂದ ಸಿಂಗ್

ಹೊಸಪೇಟೆ ಕಡೆಗಣಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸಪೇಟೆಯಲ್ಲಿ‌ ದಿನದಿಂದ ದಿನಕ್ಕೆ ಮಾಹಿತಿ‌ ಲಭ್ಯವಾಗುತ್ತಿದೆ. ಅಲ್ಲದೇ, ಹೆಚ್ಚಿನ ಸಿಬ್ಬಂದಿ ಇದ್ದಾರೆ. ಕೂಡ್ಲಿಗಿ, ಹರಪನಹಳ್ಳಿ, ಕೊಟ್ಟೂರು ಹಾಗೂ ಕುರುಗೋಡುಗಳಲ್ಲಿ ಜನರಿಗೆ ತಪಾಸಣೆ ಮಾಡುವುದಕ್ಕೆ ಯಾರೂ ಇಲ್ಲ. ಹಾಗಾಗಿ ಹೆಚ್ಚಿನ ಮಹತ್ವವನ್ನು‌ ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಕೊರೊನಾ ಮಾರ್ಗಸೂಚಿಗಳು ಉಲ್ಲಂಘನೆಯಾಗಬಾರದು ಎಂದು ರ‍್ಯಾಪಿಡ್​ ತಂಡಗಳನ್ನು ರಚನ ಮಾಡಲಾಗಿದೆ. ಜನರು ಸಹ ಕೊರೊನಾ ಹರಡದಂತೆ ಜಾಗೃತವಹಿಸಬೇಕು. ಇನ್ನು 15 ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತವೆ. ಬಳಿಕ ತಗ್ಗಲಿದೆ ಎಂದು ತಜ್ಞರು ಮಾಹಿತಿಯನ್ನು‌ ನೀಡಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.