ETV Bharat / state

ಹೊಸಪೇಟೆ ನಗರಸಭೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರುವ ಅರ್ಹತೆ ಇದೆ: ಸಚಿವ ಆನಂದ್​ ಸಿಂಗ್​ - Vijayanagar District

ಜನಸಂಖ್ಯೆ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಅರ್ಹತೆ ಪಡೆಯಬಹುದಾಗಿದೆ. ಹೊಸಪೇಟೆ ಸ್ಮಾರ್ಟ್​ ಸಿಟಿ ವ್ಯಾಪ್ತಿಗೆ ಬರಲು ಸಮಯ ಹಿಡಿಯುತ್ತದೆ. ಬಳ್ಳಾರಿಗೆ ಮೊದಲ ಆದ್ಯತೆ. ಹೊಸಪೇಟೆಯು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಬರಲಿಲ್ಲ ಅಂದರೇ ಪರವಾಗಿಲ್ಲ.

Minister Anand Singh
ಸಚಿವ ಆನಂದ್​ ಸಿಂಗ್​
author img

By

Published : Feb 22, 2021, 10:45 PM IST

ಹೊಸಪೇಟೆ: ನಗರಸಭೆಗೆ ಮಹಾನಗರ ಪಾಲಿಕೆ ಅರ್ಹತೆ ಇದೆ. ಕೆಲ ಕೊರತೆಗಳಿದ್ದು, ಅದನ್ನು ಸರಿಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಹೇಳಿದ್ದಾರೆ.

ಹೊಸಪೇಟೆ ನಗರಸಭೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರುವ ಅರ್ಹತೆ: ಆನಂದ್ ಸಿಂಗ್​

ಇಲ್ಲಿನ‌ ನಗರಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಅರ್ಹತೆ ಹೊಂದಿದ್ದರೆ ವರ್ಷಕ್ಕೆ 100 ಕೋಟಿ ರೂ.‌ಅನುದಾನ ಲಭ್ಯವಾಗಲಿದೆ. ಈ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಹೊಸಪೇಟೆಯು ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ಬರಲು ಮಾನದಂಡದಲ್ಲಿ ಹಿಂದೆ ಇವೆ.

ಜನಸಂಖ್ಯೆ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಅರ್ಹತೆ ಪಡೆಯಬಹುದಾಗಿದೆ. ಹೊಸಪೇಟೆ ಸ್ಮಾರ್ಟ್​ ಸಿಟಿ ವ್ಯಾಪ್ತಿಗೆ ಬರಲು ಸಮಯ ಹಿಡಿಯುತ್ತದೆ. ಬಳ್ಳಾರಿಗೆ ಮೊದಲ ಆದ್ಯತೆ. ಹೊಸಪೇಟೆಯು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಬರಲಿಲ್ಲ ಅಂದರೇ ಪರವಾಗಿಲ್ಲ.

ವಿಜಯನಗರ ಜಿಲ್ಲೆಗೆ ಅಭಿವೃದ್ಧಿ ಕಾರ್ಯಕ್ಕಾಗಿ ಬಜೆಟ್​​ನಲ್ಲಿ 50 ಕೋಟಿ ರೂ. ಅನುದಾನ ಬೇಡಿಕೆ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.