ETV Bharat / state

ನಾನು ಕೇಳಿದ ಖಾತೆ ಯಾಕೆ ನೀಡಲಿಲ್ಲ ಅನ್ನೋದಕ್ಕೆ ಸೂಕ್ತ ಉತ್ತರಬೇಕು: ಸಚಿವ ಆನಂದ ಸಿಂಗ್ - portfolio

ಒಂದು ಕ್ರಿಕೆಟ್ ತಂಡದಲ್ಲಿ ಅತ್ಯಂತ ಶ್ರೇಷ್ಠ ಆಟಗಾರನಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡ್ತಾರೆ. ಅದರಂತೆಯೇ ನಾನೂ ಕೂಡ ಈ ಸರ್ಕಾರ ರಚನೆ ವೇಳೆಯಲ್ಲಿ ಅತ್ಯಂತ ಶ್ರೇಷ್ಠ ಆಟಗಾರನಾಗಿ ಆಡಿದ್ದೇನೆ.‌ ಹೀಗಾಗಿ, ನನಗೆ ಮ್ಯಾನ್ ಆಫ್ ದಿ‌ ಮ್ಯಾಚ್ ಸಿಗಲೇಬೇಕೆಂದು ಸಚಿವ ಆನಂದ ಸಿಂಗ್​ ಹೇಳಿದ್ರು.

minister anand singh  unsatisfied with portfolio allocation
ಸಚಿವ ಆನಂದಸಿಂಗ್ ಪ್ರತಿಕ್ರಿಯೆ
author img

By

Published : Aug 7, 2021, 7:17 PM IST

ಬಳ್ಳಾರಿ: ನಾನು ಕೇಳಿದ ಖಾತೆ ಯಾಕೆ ನೀಡಲಿಲ್ಲ ಅನ್ನೋದಕ್ಕೆ ಸೂಕ್ತ ಉತ್ತರಬೇಕೆಂದು ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಆಗ್ರಹಿಸಿದ್ದಾರೆ. ಒಂದು ಕ್ರಿಕೆಟ್ ತಂಡದಲ್ಲಿ ಅತ್ಯಂತ ಶ್ರೇಷ್ಠ ಆಟಗಾರನಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡ್ತಾರೆ. ಅದರಂತೆಯೇ ನಾನೂ ಕೂಡ ಈ ಸರ್ಕಾರ ರಚನೆ ವೇಳೆಯಲ್ಲಿ ಅತ್ಯಂತ ಶ್ರೇಷ್ಠ ಆಟಗಾರನಾಗಿ ಆಡಿದ್ದೇನೆ.‌ ಹೀಗಾಗಿ, ನನಗೆ ಮ್ಯಾನ್ ಆಫ್ ದಿ‌ ಮ್ಯಾಚ್ ಸಿಗಲೇಬೇಕೆಂದು ಸಚಿವ ಆನಂದಸಿಂಗ್​ ಹೇಳಿದ್ರು.

ಸಚಿವ ಆನಂದ ಸಿಂಗ್ ಪ್ರತಿಕ್ರಿಯೆ

ಬಳ್ಳಾರಿಯ ಎಸ್​ಪಿ ವೃತ್ತದಲ್ಲಿರುವ ಬಿಜೆಪಿ ಕಚೇರಿಯಲ್ಲಿಂದು ನಡೆದ ಬಿಜೆಪಿ ಕಾರ್ಯಕರ್ತರ ಸಂವಾದ ಕಾರ್ಯಕ್ರಮದ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಕೇಳಿದ ಖಾತೆ ನಿಭಾಯಿಸುವಲ್ಲಿ ನಾನೇನಾದ್ರೂ ಅಸಮರ್ಥನಾಗಿರುವೆನೋ? ಅಥವಾ ನಾಲಾಯಕ್ ಇದ್ದೀನಾ?. ನಾನೇನಾದ್ರೂ ಭ್ರಷ್ಟನಾಗಿದ್ದೆನೋ, ಈ ಹಿಂದಿನ ಖಾತೆಯಲ್ಲಿ ಭ್ರಷ್ಟಾಚಾರ ನಡೆಸಿರುವೆನೋ ಅಥವಾ ಮತ್ತೇನಾದ್ರೂ ಕಾರಣಗಳಿವೆಯೋ ಎಂಬುವುದನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕೆಂದು ಸಚಿವ ಆನಂದಸಿಂಗ್ ಆಗ್ರಹಿಸಿದ್ದಾರೆ.

ನಾನೊಬ್ಬ ಹಠವಾದಿ ನನ್ನ ಹಠವನ್ನ‌ ನಾನು ಬಿಡುವುದಿಲ್ಲ. ನಾನು ರಾಜೀನಾಮೆ ನೀಡುವಾಗ ಯಾರಿಗೂ ಹೇಳಲಿಲ್ಲ. ಖುದ್ದು ನಾನೇ ಸ್ಪೀಕರ್ ಮನೆಗೆ ಹೋಗಿ ರಾಜೀನಾಮೆ ನೀಡಿದ್ದೆ‌. ಸ್ಪೀಕರ್ ರಮೇಶ ಕುಮಾರ್​ ಅವರು ರಾಜೀನಾಮೆ ಕೊಟ್ಟಿಲ್ಲ ಅಂತ ಹೇಳಿದ್ರು. ಆಗ ಮತ್ತೆ ರಾಜೀನಾಮೆ ಕೊಡುವೆ ಎಂದು ಹೇಳಿದ್ದೆ. ನನ್ನ ಛಲ ನನ್ನ ಗುರಿ ಮುಂದುವರಿಸುತ್ತೇನೆ ಎಂದ್ರು.

ನಾನು ಕೇಳಿದ ಖಾತೆ ನೀಡದಿರುವುದು ನನಗೆ ಅಸಮಾಧಾನ ತಂದಿದೆ. ನಾನು ಕೇಳಿದ ಖಾತೆ ಯಾಕೆ ನೀಡಲಿಲ್ಲ ಅನ್ನೋದನ್ನ ನನಗೆ ತಿಳಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಮನವಿ ಮಾಡುವೆ. ಈ ಸರ್ಕಾರ ಬರಲಿಕ್ಕೆ ಕಾರಣವಾದವರಲ್ಲಿ ನಾನು ಮೊದಲಿಗ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರಲ್ಲಿ ನಾನೇ ಮೊದಲಿಗ. ನಾನು ರಾಜೀನಾಮೆ ಕೊಟ್ಟಾಗ ಯಾರು ರಾಜೀನಾಮೆ ಕೊಟ್ಟಿರಲಿಲ್ಲ ಎಂದು ಹೇಳಿದ್ರು.

ನಾನು ಕೇಳಿದ ಖಾತೆ ನನಗೆ‌‌‌ ಮತ್ತು ಸಿಎಂಗೆ ಮಾತ್ರ ಗೊತ್ತು ಅಂದ್ರು. ಕೇಳಿದ ಖಾತೆ ಸಿಗದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತೀರಾ?ಅನ್ನೋ ಪ್ರಶ್ನೆಗೆ ನಾನು ಕೇಳಿದ ಖಾತೆ ಕೊಡದಿದ್ರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಪರೋಕ್ಷವಾಗಿ ರಾಜೀನಾಮೆ ಎಚ್ಚರಿಕೆ ನೀಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.