ETV Bharat / state

ಜಿಂದಾಲ್​​​ ಕಂಪನಿಗೆ ಭೂಮಿ ಪರಭಾರೆ : ಸಚಿವ ಆನಂದ್​ ಸಿಂಗ್ ಹೇಳಿದ್ದೇನು? - ವಿಪಕ್ಷಗಳು ಪ್ರಚೋದನೆ ಮಾಡುತ್ತಿವೆ ಆನಂದ್​ ಸಿಂಗ್ ಕಿಡಿ

ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಏತ ನೀರಾವರಿ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಹಾಗೂ ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ವಿಚಾರವನ್ನ ಕೈಬಿಟ್ಟು ಲೀಸ್ ಗೆ ಕೋಡೋದಾಗಿ ಭರವಸೆ ನೀಡಿದ್ದರು. ಅದರಂತೆಯೇ ನಡೆದುಕೊಳ್ಳಲಿದ್ದಾರೆಂಬ ವಿಶ್ವಾಸ ನನಗಿದೆ ಎಂದು ಸಚಿವ ಆನಂದ್​ ಸಿಂಗ್ ಹೇಳಿದ್ದಾರೆ.

ಆನಂದ್​ ಸಿಂಗ್ ಕಿಡಿ
ಆನಂದ್​ ಸಿಂಗ್ ಕಿಡಿ
author img

By

Published : May 1, 2021, 1:03 PM IST

ಬಳ್ಳಾರಿ: ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಗೆ ರಾಜ್ಯ ಸರ್ಕಾರ ಅಂದಾಜು 3,667 ಎಕರೆ ಭೂಮಿ ಪರಭಾರೆ ಮಾಡಿರೋದನ್ನ ಇಟ್ಟುಕೊಂಡೇ ಪ್ರತಿಪಕ್ಷದವರು ನನಗೆ ಪ್ರಚೋದನೆ ಮಾಡುತ್ತಿವೆ. ಅವರು ಏನೇ ಪ್ರಚೋದನೆ ಮಾಡಲಿ ಅಥವಾ ಸವಾಲು ಎಸೆದರೂ ಅದನ್ನ ಎದುರಿಸಲು ಸಮರ್ಥನಿದ್ದೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಹೇಳಿದ್ದಾರೆ.

ಆನಂದ್​ ಸಿಂಗ್ ಪ್ರತಿಕ್ರಿಯೆ

ನಗರದ ಡಿಎಆರ್ ಮೈದಾನದಲ್ಲಿಂದು ನಡೆದ 112 ಸಹಾಯವಾಣಿ ಸಂಖ್ಯೆಯ 19 ಪೊಲೀಸ್ ಅಪರಾಧ ರಕ್ಷಣಾ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಸಮೂಹ ಸಂಸ್ಥೆಗೆ ರಾಜ್ಯ ಸರ್ಕಾರ ಭೂಮಿ ಪರಭಾರೆ ಮಾಡಿರೋದು ತರಾತುರಿಯಲ್ಲಿ ಆಗಿರಬಹುದು. ಆದರೆ, ನಾನು ಈಗಾಗಲೇ ಭೂಮಿ ಪರಭಾರೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿರುವೆ. ಅವರ ನಿಲುವು ಏನಿದೆ ಎಂಬೋದರ ಕುರಿತ ನೋಡಿಕೊಂಡು ನಂತರ ನನ್ನ ನಿರ್ಧಾರವನ್ನು ಸರ್ಕಾರದ ಮಟ್ಟದಲ್ಲಿ ತಿಳಿಸುವೆ ಎಂದರು.

ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ಮಾಡುವುದರಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ದಿನಮಾನಗಳಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ. ಸಿಎಂ ಬಿಎಸ್ ವೈ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಏತ ನೀರಾವರಿ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಹಾಗೂ ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ವಿಚಾರವನ್ನ ಕೈಬಿಟ್ಟು ಲೀಸ್ ಗೆ ಕೋಡೋದಾಗಿ ಭರವಸೆ ನೀಡಿದ್ದರು. ಅದರಂತೆಯೇ ನಡೆದುಕೊಳ್ಳಲಿದ್ದಾರೆಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಓದಿ : ದೊಡ್ದ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ .. ಅಭಿಯಾನಕ್ಕೆ ಸಾಂಕೇತಿಕ ಚಾಲನೆ : ಸಚಿವ ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.