ಹೊಸಪೇಟೆ (ವಿಜಯನಗರ): ದೆಹಲಿಗೆ ಹೋಗುವ ಕುರಿತು ಮಾಧ್ಯಮದವರ ಮುಂದೆ ಎಂದೂ ಮಾತನಾಡಿಲ್ಲ. ಹಾಗಾಗಿ ದೆಹಲಿಗೆ ಹೋಗುವುದಿಲ್ಲ ಎಂದು ಸಚಿವ ಆನಂದ ಸಿಂಗ್ ಹೇಳಿದರು.
ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಮಾತನಾಡಿದ ಅವರು, ಬೇಡಿಕೆಗಳನ್ನು ನಾಯಕರು ಪೂರೈಸಿದ್ದಾರೆ. ಬೆಂಗಳೂರು ಮುಖಂಡರ ಆಶೀರ್ವಾದ ಪಡೆಯಲು ಹೋಗಿದ್ದೆ. ಬಿ.ಎಸ್.ಯಡಿಯೂರಪ್ಪ ಮುಂದೆ ಖಾತೆ ಬದಲಾವಣೆ ಮಾಡಿಸುವ ಕುರಿತು ಮಾತನಾಡಿಲ್ಲ ಎಂದು ಹೇಳಿದರು.
ಖಾತೆ ಕುರಿತು ಹೇಳುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಏನೂ ಹೇಳಿಲ್ಲ. ಆದರೆ, ದುಡಿಕಿನ ನಿರ್ಧಾರ ತಗೆದುಕೊಳ್ಳಬಾರದು ಎಂದು ಯಡಿಯೂರಪ್ಪ ಅವರು ಸಲಹೆ ನೀಡಿದ್ದಾರೆ. ಅಲ್ಲದೇ, ಸಮಸ್ಯೆ ಪರಿಹರಿಸುವ ಕುರಿತು ಕಾದು ನೋಡುವೆ ಎಂದರು.
ಆ.15 ರಂದು ಧ್ವಜಾರೋಹಣವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಮಾಡಲಾಗುವುದು. ಉಳಿದ ರೋಟರಿ ಹಾಗೂ ಜೋಳದರಾಶಿ ಗುಡ್ಡದಲ್ಲಿ ಮುಖಂಡರು ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಬೆಂಗಳೂರಿಗೆ ಹೋಗುವೆ. ಬಳ್ಳಾರಿ ನಗರದಲ್ಲಿ ಜಿಲ್ಲಾಧಿಕಾರಿ ದ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಿದರು.
ಓದಿ: ಬೆಂಗಳೂರಿನಲ್ಲಿ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ್ದೇ ಬಿಜೆಪಿಯವರು.. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್