ETV Bharat / state

ಸ್ವಯಂ ಶಕ್ತಿ ಯೋಜನೆಯಡಿ ಮಾಸ್ಕ್ ತಯಾರಿಕೆ: ಮಹಿಳೆಯರಿಗೆ ಆರ್ಥಿಕ ಬಲ ನೀಡಿದ ಜಿಲ್ಲಾಡಳಿತ

author img

By

Published : May 6, 2020, 10:21 PM IST

ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಸ್ವಯಂ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ತರಬೇತಿ ನೀಡಿ, ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ಅವರೆಲ್ಲರೂ ಮಾಸ್ಕ್​ ತಯಾರಿಕೆಯಲ್ಲಿ ತೊಡಗಿದ್ದು, ಆರ್ಥಿಕ ಸದೃಢತೆ ಹೊಂದುತ್ತಿದ್ದಾರೆ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ಹೇಳಿದರು.

Mask making by women in Bellary
ಸ್ವಯಂ ಶಕ್ತಿ ಯೋಜನೆ ಅಡಿ ಮಾಸ್ಕ್ ತಯಾರಿಕೆ

ಸಂಡೂರು (ಬಳ್ಳಾರಿ): ಜಿಲ್ಲಾ ಖನಿಜ ನಿಧಿಯ ಸಂಡೂರು ಸ್ವಯಂಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗಿರುವ ಹೊಲಿಗೆ ತರಬೇತಿಯಿಂದ ಮಹಿಳೆಯರು ಮಾಸ್ಕ್ ತಯಾರಿಕೆ ಮಾಡುತ್ತಿದ್ದು, ಖರೀದಿಗೆ ಕೈಗಾರಿಕೆಗಳು ಮುಂದೆ ಬಂದಿವೆ. ಇದಕ್ಕೆ ಜಿಲ್ಲಾಡಳಿತವು ಮಹಿಳಾ ಸ್ವಯಂ ಶಕ್ತಿ ಹಾಗೂ ಕೈಗಾರಿಕೆಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ತಿಳಿಸಿದ್ದಾರೆ.

Mask making by women in Bellary
ಸ್ವಯಂ ಶಕ್ತಿ ಯೋಜನೆ ಅಡಿ ಮಾಸ್ಕ್ ತಯಾರಿಕೆ

ಇಲ್ಲಿನ ಭುಜಂಗನಗರ ಮತ್ತು ವಿಠ್ಠಲಾಪುರದ 176 ಮಹಿಳೆಯರಿಗೆ ತರಬೇತಿ ಹಾಗೂ ಹೊಲಿಗೆ ಯಂತ್ರ ಕೂಡಾ ನೀಡಲಾಗಿತ್ತು. ಅವರಿಗೆ ಕೊರೊನಾ ಸಂದರ್ಭದಲ್ಲಿ ಮರು ಬಳಕೆ ಮಾಡಬಹುದಾದ ಮಾಸ್ಕ್​ಗಳ ತಯಾರಿಕೆಗೆ ತಿಳಿಸಲಾಗಿತ್ತು. ಮಾಸ್ಕ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ಕಚ್ಚಾ ವಸ್ತು ಮತ್ತು ಮಾಸ್ಕ್ ಹೊಲಿಯುವುದಕ್ಕೆ ಬೇಕಾದ ಕೂಲಿ ಸೇರಿ ಪ್ರತಿ ಮಾಸ್ಕ್​ಗೆ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

Mask making by women in Bellary
ಸ್ವಯಂ ಶಕ್ತಿ ಯೋಜನೆ ಅಡಿ ಮಾಸ್ಕ್ ತಯಾರಿಕೆ

ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಕೈಗಾರಿಕಾ ಕೇಂದ್ರವು ಮಹಿಳಾ ಗುಂಪುಗಳು ಮತ್ತು ಕಾರ್ಖಾನೆಗಳನ್ನು ಸಂಪರ್ಕಿಸಿ, ಮಾಸ್ಕ್ ಪೂರೈಕೆಗೆ ಅನುವು ಮಾಡಿಕೊಡಲಿದೆ. ಈಗಾಗಲೇ ಎಸಿಸಿ ಸಿಮೆಂಟ್ ಕಂಪನಿ 3 ಸಾವಿರ ಮಾಸ್ಕ್​ಗಳನ್ನು, ಜಹಿರಾಜ್ ಇಸ್ಪಾತ್ 500 ಮತ್ತು ಹೋತೂರು ಸ್ಟೀಲ್ 200 ಮಾಸ್ಕ್​ಗಳನ್ನು ತಯಾರಿಸುವಂತೆ ತಿಳಿಸಿದೆ.

ಸಂಡೂರು ಸ್ವಯಂ ಶಕ್ತಿ ಯೋಜನೆಯಡಿ ಇನ್ನೂ 1080 ಮಹಿಳೆಯರಿಗೆ ತರಬೇತಿ ನೀಡಬೇಕಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಡ್ಡಿ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ತರಬೇತಿ ನೀಡಿ, ಹೊಲಿಗೆ ಯಂತ್ರಗಳನ್ನು ಡಿಎಂಎಫ್ ಅಡಿ ಒದಗಿಸಲಾಗುವ ನಿರೀಕ್ಷೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.