ಬಳ್ಳಾರಿ: ಬಳ್ಳಾರಿ ವಲಯದ ನೂತನ ಐಜಿಪಿಯಾಗಿ ಮನೀಶ್ ಖರ್ಬಿಕರ್ ಅವರನ್ನ ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಲಿ ಐಜಿಪಿ ಮನೀಶ್ ಅವರು ಕಲಬುರಗಿ ವಲಯದ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಬಳ್ಳಾರಿ ವಲಯದ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ನಂಜುಂಡ ಸ್ವಾಮಿ ಅವರನ್ನ ಬೆಂಗಳೂರು ಕಾರಾಗೃಹದ ಐಜಿಪಿಯಾಗಿ ವರ್ಗಾವಣೆಗೊಳಿಸಿದೆ.
ಐಜಿಪಿ ನಂಜುಂಡಸ್ವಾಮಿ ಅವರು ಬಳ್ಳಾರಿ ವಲಯದ ಐಜಿಪಿಯಾಗಿ 2019 ಫೆ.23 ರಂದು ಅಧಿಕಾರ ಸ್ವೀಕರಿಸಿ ಸುಮಾರು ಎರಡೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: ಮಾದಪ್ಪನ ಬೆಟ್ಟದ ಆಸ್ಪತ್ರೆಗೆ ಶೀಘ್ರದಲ್ಲೇ ವೈದ್ಯರು, ಆ್ಯಂಬುಲೆನ್ಸ್: ಸಚಿವ ಸುರೇಶ್ ಕುಮಾರ್