ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಶಂಕರಗುಡ್ಡ ಗ್ರಾಮದ ಯುವಕ ಹರನ್ ಚಂದ್ರ ಮಂಡಲ್ ಎಂಬಾತ ತನ್ನ ಸ್ನೇಹಿತನಿಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದ. ಆದರೆ ಖಾತೆಯಿಂದ ಹಣ ಕಡಿತವಾದರೂ ಸ್ನೇಹಿತನಿಗೆ ಹಣ ತಲುಪದೆ ಗೊಂದಲ ಸೃಷ್ಟಿಯಾಗಿದೆ.
ನಂತರ ಹರನ್ ಸಹಾಯಕ್ಕಾಗಿ ಗೂಗಲ್ನಲ್ಲಿ ಗೂಗಲ್ ಪೇ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿದ್ದಾನೆ. ನಂತರ 9832749337 ನಂಬರ್ ಸಿಕ್ಕಿದೆ. ಕರೆ ಮಾಡಿದಾಗ ಗೂಗಲ್ ಪೇನಲ್ಲಿ ದೋಷವುಂಟಾಗಿದೆ. ಅದನ್ನು ಸರಿಪಡಿಸುವುದಾಗಿ ಹೇಳಿ ಕ್ಯೂ.ಎಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಂತರ ಗೂಗಲ್ ಪೇನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಎ.ಟಿ.ಎಂ ಕಾರ್ಡ್ ಹಾಕುವಂತೆ ವ್ಯಕ್ತಿಯೊಬ್ಬ ತಿಳಿಸಿದ್ದಾನೆ.
ಹರನ್ ಯಥಾವತ್ತಾಗಿ ತನ್ನ ಬ್ಯಾಂಕ್ ಖಾತೆಯ ಎಲ್ಲಾ ಮಾಹಿತಿಯನ್ನು ಆ್ಯಪ್ನಲ್ಲಿ ಹಾಕಿದ್ದಾನೆ. ಇದಾದ ತಕ್ಷಣ ಹರನ್ ಖಾತೆಯಿಂದ ಹಂತ ಹಂತವಾಗಿ 99,405 ರೂಪಾಯಿ ಕಡಿತವಾಗಿದೆ. ಇದರಿಂದ ಹಣ ಕಳೆದುಕೊಂಡ ಹರನ್ ಈ ಸಂಬಂಧ ಈಗ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.