ETV Bharat / state

ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿ: ಗಾಬರಿಗೊಂಡ ವ್ಯಕ್ತಿ ಹೃದಯಾಘಾತದಿಂದ ಸಾವು ಶಂಕೆ

ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕುರುಗೋಡು ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರ ದಾಳಿಗೆ ಗಾಬರಿಗೊಂಡ ಶ್ರೀಕಾಂತ್ ಅವರಿಗೆ ಹೃದಯಾಘಾತವಾಗಿ ಸಾವಿಗೀಡಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ‌.

kuragodu
kuragodu
author img

By

Published : May 2, 2020, 8:35 AM IST

ಬಳ್ಳಾರಿ: ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯ ಕುರುಗೋಡು ಪಟ್ಟಣ ಹೊರವಲಯದ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಜೂಜಿನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾನೆ.

ಜಿಲ್ಲೆಯ ಕುರುಗೋಡು ಪಟ್ಟಣದ ನಿವಾಸಿ ಶ್ರೀಕಾಂತ್ (34)‌ ಮೃತ ವ್ಯಕ್ತಿ. ಲಾಕ್ ಡೌನ್ ದಿನಗಳನ್ನ ಕಳೆಯುವ ಸಲುವಾಗಿ ಹತ್ತಾರು ಯುವಕರ ಪಡೆಯೊಂದು ಜೂಜಿನಲ್ಲಿ ತೊಡಗಿದ್ದರು.

ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕುರುಗೋಡು ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರ ದಾಳಿಗೆ ಗಾಬರಿಗೊಂಡ ಶ್ರೀಕಾಂತ್ ಅವರಿಗೆ ಹೃದಯಾಘಾತವಾಗಿ ಸಾವಿಗೀಡಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ‌.

ಕೂಡಲೇ ಕುರುಗೋಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದುದಾಗ ಯುವಕ ಸಾವನ್ನಪ್ಪಿರುವುದು ಖಾತ್ರಿಯಾಗಿದೆ. ಆತನ ಸಂಬಂಧಿಕರು ಮೃತದೇಹವನ್ನ ಆಸ್ಪತ್ರೆ ಎದುರು ಇಟ್ಟುಕೊಂಡು ಕೆಲಕಾಲ ಪ್ರತಿಭಟನೆ ನಡೆಸಿ, ಕುರುಗೋಡು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.