ಹೊಸಪೇಟೆ: ಮೈಲಾರ ಜಾತ್ರೆಗೆ ಭಕ್ತರನ್ನು ನಿಷೇಧಿಸುವ ಅಧಿಕಾರ ನಮಗಿಲ್ಲ. ಅದು ಜಿಲ್ಲಾಡಳಿತ ವ್ಯಾಪ್ತಿಗೆ ಬರುತ್ತಿದೆ. ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುವ ಜವಾಬ್ದಾರಿ ನಮ್ಮದು ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಪ್ರತಿಕ್ರಿಯೆ ನೀಡಿದರು.
ಓದಿ: ನೋಟಿಸ್ಗೆ ನಾ ಹೆದರಲ್ಲ, ನೀವು ಕುರ್ಚಿ ಬಿಡಬೇಕಾದೀತು: ಯತ್ನಾಳ್ ಗುಡುಗು
ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಲ್ಲಿ ಬೇರೆ ಜಿಲ್ಲೆಯವರು ಮೈಲಾರ ಜಾತ್ರೆಗೆ ಬರದಂತೆ ನಿಷೇಧ ಮಾಡಿರುವುದಕ್ಕೆ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಇಂದು ಹೂವಿನಹಡಗಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೈಲಾರ ದೇವಾಲಯವು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಕೊರೊನಾ ಇರುವ ಕಾರಣಕ್ಕೆ ಈ ಬಾರಿ ಮೈಲಾರ ಲಿಂಗೇಶ್ವರನ ಜಾತ್ರೆಯನ್ನು ಸರಳವಾಗಿ ಮಾಡಲಾಗುತ್ತಿದೆ. ಅಲ್ಲದೆ ಬೇರೆ ಜಿಲ್ಲೆಯ ಭಕ್ತರಿಗೆ ಅವಕಾಶ ನೀಡಿಲ್ಲ. ಹಾಗಾಗಿ ಅವರ ಆದೇಶ ನಾವು ಪಾಲನೆ ಮಾಡಬೇಕು ಎಂದು ಹೇಳಿದರು.
ನಾನು ಜಾತ್ರೆಗೆ ಭಕ್ತರನ್ನು ಬರದಂತೆ ನಿಷೇಧ ಮಾಡಿ ಎಂದಿಲ್ಲ. ಧಾರ್ಮಿಕ ಕಾರ್ಯಗಳನ್ನು ನಡೆಸಲು ಮನವಿ ಮಾಡಲಾಗಿದೆ. ವಿನಾ ಕಾರಣ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸೋದು ತಪ್ಪು. ಎಲ್ಲಾ ಅಧಿಕಾರ ಇರೋದು ಬಳ್ಳಾರಿ ಜಿಲ್ಲಾಧಿಕಾರಿಗೆ ಎಂದು ಸ್ಪಷ್ಟನೆ ನೀಡಿದ್ದಾರೆ.