ETV Bharat / state

ಪ್ರಿಯತಮೆಯಿಂದಲೇ ಪ್ರಿಯಕರನ ಬರ್ಬರ ಕೊಲೆ: ಹಾಡಹಗಲೇ ಬೆಚ್ಚಿಬಿದ್ದ ಬಳ್ಳಾರಿ ಜನ - ಪ್ರಿಯಕರನ ಹತ್ಯೆ

ಬಳ್ಳಾರಿಯಲ್ಲಿ ನೆತ್ತರು ಹರಿದಿದೆ. ಪ್ರಿಯತಮೆಯೇ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಈ ಭೀಕರ ಕೊಲೆ ಪ್ರಕರಣ ನಾಲ್ಕು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ನಗರದ ಜನರನ್ನು ಬೆಚ್ಚಿಬೀಳಿಸಿದೆ.

lover-murdered-by-his-girlfriend-in-bellary
ಪ್ರಿಯತಮೆಯಿಂದಲೇ ಪ್ರಿಯಕರನ ಬರ್ಬರ ಕೊಲೆ
author img

By

Published : Mar 24, 2021, 3:23 PM IST

Updated : Mar 24, 2021, 3:50 PM IST

ಬಳ್ಳಾರಿ: ಪ್ರೇಯಸಿಯೇ ಪ್ರಿಯಕರನನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಕರನಿಗೆ ಮೊದಲು ನಿದ್ರೆ ಮಾತ್ರೆ ನೀಡಿ ಬಳಿಕ ಪ್ರೇಯಸಿ ಹತ್ಯೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ತೋರಣಗಲ್ಲು​ ನಿವಾಸಿ ಆಶಿಷ್ ಡೇ (30) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಹತ್ಯೆ ಬಳಿಕ ಪಶ್ಚಿಮ ಬಂಗಾಳದ ಮೂಲದ ಪ್ರಿಯತಮೆ ಮಾಯಾ ಪರಾರಿಯಾಗಿದ್ದಾಳೆ. ಕೊಲೆ ಪ್ರಕರಣ 4 ದಿನದ ಬಳಿಕ ಬೆಳಕಿಗೆ ಬಂದಿದ್ದು, ನಗರದ ಜನರನ್ನು ಬೆಚ್ಚಿಬೀಳಿಸಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಬಾಬಾ ನಗರದ ನಿವಾಸದಲ್ಲಿ ಆಶಿಷ್ ಡೇಯೊಂದಿಗೆ ಪ್ರಿಯತಮೆ ನೆಲೆಸಿದ್ದಳು. ಆದರೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಗಲಾಟೆ ನಡೆದಿದೆ ಎನ್ನಲಾಗ್ತಿದೆ.

ಕೊಲೆಗೆ ಸಹಕರಿಸಿದ ಮುತ್ತುಸ್ವಾಮಿ ಹಾಗೂ ರಮೇಶ್ ಎಂಬುವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಆಶಿಷ್​ನು ಆರೋಪಿಗಳಾದ ಮಾಯಾ, ಮುತ್ತುಸ್ವಾಮಿ, ರಮೇಶ್​ ಎಲ್ಲರೂ ಒಂದೇ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆ ಸಂಬಂಧ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್​​ಐ ಕಾಳಿಂಗ ಅವರ ನೇತೃತ್ವದಲ್ಲಿ‌ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ರಾತ್ರಿ ಮಲಗಿದ್ದವನು ಬೆಳಗಾಗುವಷ್ಟರಲ್ಲೇ ಮರ್ಡರ್ ಆದ..!

Last Updated : Mar 24, 2021, 3:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.