ಬಳ್ಳಾರಿ: ಲಾರಿ ಚಾಲಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿನಾಯಕ ನಗರದ ಬಳಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 5-6ರ ತಡರಾತ್ರಿ ಲಾರಿ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಲ್ಲೀಪುರ ನಿವಾಸಿ ಲೋಕೇಶ (42) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೋರ್ವ ಲಾರಿ ಚಾಲಕ ಸುರೇಶ ಕೊಲೆಯ ಆರೋಪಿಯಾಗಿದ್ದಾನೆ.
ಮದ್ಯ ಸೇವನೆ ವೇಳೆ ಇವರಿಬ್ಬರು ಯಾವುದೋ ವಿಷಯಕ್ಕೆ ಕಿರಿಕ್ ಮಾಡಿಕೊಂಡಿದ್ದಾರೆ. ಕುಪಿತಗೊಂಡ ಸುರೇಶ ಕಲ್ಲಿನಿಂದ ಲೋಕೇಶನ ತಲೆಗೆ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಗಾಬರಿಗೊಂಡು ಸುರೇಶ ಪರಾರಿಯಾಗಿದ್ದನು. ಬಳಿಕ ಆರೋಪಿ ಸುರೇಶನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.