ಬಳ್ಳಾರಿ: ಮೈಮೇಲೆ ಮೇಲೆ ಲಾರಿ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಿರುಗುಪ್ಪ ತಾಲೂಕಿನ ಇಬ್ರಾಹಿಂಪುರದ ಬಳಿ ನಡೆದಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಾಲಗುಂದಾ ನಿವಾಸಿ, ನಾಗಮ್ಮ (35) ಮೃತಪಟ್ಟಿರುವ ಮಹಿಳೆ. ಬೈಕಿನಿಂದ ಆಯತಪ್ಪಿ ಕೆಳಗೆ ಬಿದ್ದ ವೇಳೆ ಈಕೆಯ ಮೇಲೆ ಲಾರಿ ಹರಿದಿದೆ.
ಈ ಸಂಬಂಧ ಸಿರುಗುಪ್ಪಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.