ETV Bharat / state

ಬಳ್ಳಾರಿಯಲ್ಲಿ ಮದಿರೆಗಾಗಿ ಮುಗಿಬಿದ್ದ ಮಂಗಳಮುಖಿಯರು.. ಯುವಕರಿಂದ ಭರ್ಜರಿ ಡ್ಯಾನ್ಸ್​! - ಮದ್ಯ ಮಾರಾಟಕ್ಕೆ ಅವಕಾಶ

ರಾಜ್ಯದ ಹಲವೆಡೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಮದ್ಯ ಪ್ರಿಯರು ಮದ್ಯದಂಗಡಿಯ ಮಂದೆ ಸರದಿ ಸಾಲಲ್ಲಿ ಮದ್ಯ ಪಡೆಯಲು ನಿಂತಿರುವುದು ಕಂಡುಬರುತ್ತಿದೆ. ಇದಲ್ಲದೆ ಬಳ್ಳಾರಿಯಲ್ಲಿ ಮದ್ಯ ಕೊಳ್ಳಲು ಮಂಗಳಮುಖಿಯರು ಬಾರ್ ಕಡೆ ಹೆಜ್ಜೆಹಾಕಿದರೆ, ಇನ್ನೊಂದೆಡೆ ಮದ್ಯ ಸಿಕ್ಕಿದ ಖುಷಿಯಲ್ಲಿ ಯುವಕರು ರಸ್ತೆ ಮೇಲೆ ಹೆಜ್ಜೆಹಾಕಿದ್ದಾರೆ.

Long line in Liquor shops at Bellary: people dancing with liquor
ಬಳ್ಳಾರಿಯಲ್ಲಿ ಮದಿರೆಗಾಗಿ ಮುಗಿಬಿದ್ದ ಮಂಗಳಮುಖಿಯರು: ಯುವಕರ ಭರ್ಜರಿ ಡ್ಯಾನ್ಸ್​
author img

By

Published : May 4, 2020, 7:33 PM IST

ಬಳ್ಳಾರಿ : ರಾಜ್ಯಾದ್ಯಂತ ಕೆಲವು ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯಪ್ರಿಯರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇಲ್ಲಿನ ಮೋತಿ ವೃತ್ತದ ವೇಣು ಲಿಕ್ಕರ್ ಬಾರ್ ಅಂಗಡಿಯಲ್ಲಿ ಸಾರ್ವಜನಿಕರು ಸಾಲಿನಲ್ಲಿ ನಿಂತು ವೈನ್ ಪಡೆಯುತ್ತಿದ್ದರು. ಆದರೆ, ಏಕಾಏಕಿ ನಾಲ್ಕೈದು ಮಂಗಳಮುಖಿಯರು ಕ್ಯೂನಲ್ಲಿ ನಿಲ್ಲದೇ ನೇರವಾಗಿ ಬಾರ್ ಹತ್ತಿರ ಹೋಗಿ ಎಣ್ಣೆ ಪಡೆದರು.

ಸ್ಥಳಕ್ಕೆ ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ಭೇಟಿ ಮಾಡಿ, ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್​​​​ಗಳನ್ನು ಹಾಕಿಸಿದರು. ನಾಲ್ಕೈದು ಸ್ನೇಹಿತರು ಬಾರ್ ಬಳಿಬಂದು ಎಣ್ಣೆ ಪಡೆದಿದ್ದಲ್ಲದೆ ಬಳಿಕ ರಸ್ತೆ ಮೇಲೆ ಖುಷಿಯಿಂದ ಕುಣಿದು ಕುಪ್ಪಳಿಸಿದ ಪ್ರಸಂಗ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.