ಬಳ್ಳಾರಿ: ರಾಜ್ಯದಲ್ಲಿ ಜೂನ್ 7 ರ ನಂತರ ಲಾಕ್ಡೌನ್ ಮುಂದುವರಿಸಬೇಕೋ ಅಥವಾ ಬೇಡವೋ ಅಂತ ನನ್ನ ಸಲಹೆ ಕೇಳಿದ್ರೆ ಮುಂದುವರಿಸಿ ಅಂತ ಹೇಳುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ಸಂಜೆ ನಡೆದ ಕೋವಿಡ್ ಸ್ಥಿತಿಗತಿ ಕುರಿತಾದ ಸಭೆ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ರು. ರಾಜ್ಯದಲ್ಲಿ ಸದ್ಯ ಕೋವಿಡ್ ಸೋಂಕಿತರ ಪ್ರಮಾಣ ಕಡಿಮೆ ಆಗಿದೆ. ಅದರಿಂದ ಈಗ ಲಾಕ್ಡೌನ್ ಸಡಿಲಿಕೆ ಮಾಡೋದ್ರರಿಂದ ಏನೂ ಪ್ರಯೋಜನೆ ಇಲ್ಲ. ತಜ್ಞರಿಂದ ಸೂಕ್ತ ವರದಿ ಪಡೆದುಕೊಂಡೇ ಇನ್ನಷ್ಟು ದಿನಗಳ ಕಾಲ ಲಾಕ್ಡೌನ್ ಮುಂದುವರಿಸೋದು ಸೂಕ್ತವೆಂದು ನನಗೆ ಅನಿಸುತ್ತದೆ ಅಂತಾ ಸಚಿವ ಆನಂದಸಿಂಗ್ ಹೇಳಿದ್ರು.
ಈ ಲಾಕ್ಡೌನ್ ವಿಸ್ತರಣೆ ಕುರಿತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಾಜ್ಯ ಸರ್ಕಾರ ಪರಮಾಧಿಕಾರ ನೀಡಿದೆ. ಸದ್ಯದ ಮಟ್ಟಿಗೆ ಈ ಲಾಕ್ಡೌನ್ ತೆರವುಗೊಳಿಸಬಾರದೆಂದು ನನ್ನ ವೈಯುಕ್ತಿಕ ಅಭಿಪ್ರಾಯ. ಲಾಕ್ಡೌನ್ನಿಂದ ಕೆಲವರಿಗೆ ಸಮಸ್ಯೆಯಾಗುತ್ತದೆ. ಇದಕ್ಕಾಗಿ ಈಗಾಗಲೇ ಸಿಎಂ ಬಿಎಸ್ವೈ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಏನೇ ಆದರೂ ಲಾಕ್ಡೌನ್ ಮುಂದುವರಿಸುವುದೇ ಸೂಕ್ತ ಎಂದು ಸಚಿವರು ಹೇಳಿದರು.