ETV Bharat / state

ಕರ್ತವ್ಯನಿರತ ಲೈನ್​​ಮನ್ ಸಾವು ಪ್ರಕರಣದ ತನಿಖೆಗೆ ಆಗ್ರಹ - Hospet news

ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್​​ಮನ್ ಸಾವನ್ನಪ್ಪಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಜೆಸ್ಕಾಂ ಸಿಬ್ಬಂದಿ ಒತ್ತಾಯಿಸಿದ್ದಾರೆ.

Meeting
Meeting
author img

By

Published : Aug 25, 2020, 12:18 PM IST

ಬಳ್ಳಾರಿ(ಹೊಸಪೇಟೆ): ಜಿಲ್ಲೆಯ ಕಂಪ್ಲಿಯಲ್ಲಿ ಇಟಗಿ ಗ್ರಾಮದ ಬಳಿ ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್​ಮನ್ ಹನುಮಂತಪ್ಪ ಮೃತಪಟ್ಟ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಜೆಸ್ಕಾಂ ಸಿಬ್ಬಂದಿ ಒತ್ತಾಯಿಸಿದ್ದಾರೆ.

ಜೆಸ್ಕಾಂ ಆವರಣದಲ್ಲಿ ನಡೆಸಿದ ಸಭೆಯಲ್ಲಿ ಜೆಸ್ಕಾಂ ಸಿಬ್ಬಂದಿ, ಕರ್ತವ್ಯನಿರತರಾದ ಸಂದರ್ಭದಲ್ಲಿ ಹನುಮಂತಪ್ಪ ಅವರು ಮೃತಪಟ್ಟಿದ್ದಾರೆ.‌ ಇದು ದುಃಖಕರ ಸಂಗತಿಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯ ಎಸ್.ಬಿ.ಆನಂದ, ಹೊಸಪೇಟೆ ಗ್ರಾಮೀಣ ವಿಭಾಗದ ಎಇಇ ನರೇಶ, ಸೆಕ್ಷನ್ ಅಧಿಕಾರಿ ಮಹಾಂತೇಶ ಎಸ್. ತುಂಬದ್ ಇನ್ನಿತರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.