ಬಳ್ಳಾರಿ: ರೈತರ ಜಮೀನಿಗೆ ಟ್ರಾನ್ಸ್ಫಾರ್ಮರ್ ಕೂರಿಸಲು ಲಂಚ ಕೇಳಿದ ಆರೋಪದಡಿ ಲೈನ್ಮ್ಯಾನ್ವೋರ್ವನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ವೆಂಕರೆಡ್ಡಿ ಕ್ಯಾಂಪ್ನಲ್ಲಿ ರೈತ ಬಿ. ಸತ್ಯನಾರಾಯಣ ಮತ್ತು ಐವರು ಸೇರಿ ಒಂದು ಟ್ರಾನ್ಸ್ಫಾರ್ಮರ್ ಕೂರಿಸಿಕೊಳ್ಳಲು ಜೆ.ಇಗೆ ಮನವಿ ಸಲ್ಲಿಸಿದ್ದರು.
63 ಕೆವಿ ಸಾಮರ್ಥ್ಯ ಇರುವ ಟಿಸಿಗೆ 8 ಜನ ರೈತರು ಮೋಟಾರ್ ಬಳಸಿದ್ದರಿಂದ ಕರೆಂಟ್ ಪೂರೈಸುವಾಗ ಮೋಟಾರ್ ಬಂದ್ ಆಗಿದ್ದವು. ನಂತರ ರೈತರು ಜೆ.ಇ ಬಳಿ ಮಾತಮಾಡಿದ್ದರು. ಅದಕ್ಕೆ ಅವರು 100 ಕೆವಿ ಸಾಮರ್ಥ್ಯ ಇರುವ ಟಿಸಿ ಹಾಕಿಕೊಳ್ಳಬೇಕು, ಟಿಸಿ ಬರಲು ಮೂರು ತಿಂಗಳಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಲೈನ್ಮ್ಯಾನ್ ಬಳಿ ಮಾತನಾಡಿ ಎಂದು ಹೇಳಿದ್ದರಂತೆ.
ಲೈನ್ಮ್ಯಾನ್ಗೆ ಮಾತನಾಡಿಸಿದಾಗ ಹೊಸದಾಗಿ ಅಕ್ರಮ-ಸಕ್ರಮದಲ್ಲಿ ಬಂದ ಇಬ್ಬರು ರೈತರಿಗೆ ತಲಾ 10,000 ಸಾವಿರ ನೀಡಿ ಮತ್ತು ಆರು ಜನ ರೈತರು ತಲಾ 6,500 ರೂಪಾಯಿ ನೀಡಿ ಎಂದು ಲಂಚದ ಬೇಡಿಕೆಯನ್ನು ಲೈನ್ಮ್ಯಾನ್ ಇಟ್ಟಿದ್ದ ಎಂದು ತಿಳಿದುಬಂದಿದೆ.
ಟಿಸಿ ಯಿಂದ ಈ ಎಂಟು ಜನ ರೈತರಿಗೆ ಕರೆಂಟ್ ಪೂರೈಸಿದ್ದೇನೆ. ಎಲ್ಲರೂ ಹಣ ನೀಡಿದ್ದಾರೆ. ನೀನು ( ಬಿ. ಸತ್ಯನಾರಾಯಣ) ಸಹ 6,500 ರೂಪಾಯಿ ನೀಡಿ ಎಂದು ಲಂಚದ ಬೇಡಿಕೆ ಇಟ್ಟಿದ್ದನಂತೆ. ಹಣ ನೀಡದ ಕಾರಣ ಬುಧವಾರ ಬಿ.ಸತ್ಯನಾರಾಯಣ ಜಮೀನಿನಲ್ಲಿನ ವಿದ್ಯುತ್ ಸಂಪರ್ಕವನ್ನು ಲೈನ್ಮ್ಯಾನ್ ಕಟ್ ಮಾಡಿದ್ದನಂತೆ.
ಆಗ ರೈತ ಸತ್ಯನಾರಾಯಣ ಎಸಿಬಿ ಗೆ ದೂರು ನೀಡಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು. ಈ ಕಾರ್ಯಾಚರಣೆಯಲ್ಲಿ ಬಳ್ಳಾರಿ ಎಸಿಬಿ ಇನ್ಸ್ಪೆಕ್ಟರ್ ಮತ್ತು ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಸಿಬ್ಬಂದಿ ಇದ್ದರು.