ETV Bharat / state

ತಂಗಿಯನ್ನೇ ಕೊಂದ ಅಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ - ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

2017ರಲ್ಲಿ ಈ ಕೊಲೆ ನಡೆದಿತ್ತು. ನಿನ್ನ ಬೇಜವಾಬ್ದಾರಿಯೇ ಈ ಸಮಸ್ಯೆಗೆಲ್ಲಾ ಕಾರಣ ಎಂದು ಬುದ್ಧಿ ಮಾತು ಹೇಳಿದ ತಂಗಿ ಶಕುಂತಲಾಳನ್ನು ಕೊಂದಿದ್ದ ಅಣ್ಣ ಈಗ ಜೈಲು ಸೇರಿದ್ದಾನೆ.

Additional District and Sessions Court
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
author img

By

Published : Sep 8, 2022, 4:11 PM IST

ಬಳ್ಳಾರಿ: ಸ್ವಂತ ತಂಗಿಯನ್ನೇ ಕೊಂದ ಅಣ್ಣನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಸಿರುಗುಪ್ಪ ತಾಲೂಕಿನ ನಾಗರಾಜ ಎಂಬಾತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಲು ಬಂದ ತಂಗಿ ಶಕುಂತಲಾ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದನು.

ಸರಿಯಾಗಿ ಕೆಲಸ ಮಾಡದೇ ಖಾಲಿ ತಿರುಗುತ್ತಿದ್ದ ನಾಗರಾಜನ ಹೆಂಡತಿ ಜಗಳ ಮಾಡಿ ತವರು ಸೇರಿದ್ದಳು. ನಿನ್ನ ಬೇಜವಾಬ್ದಾರಿಯೇ ಈ ಸಮಸ್ಯೆಗೆಲ್ಲಾ ಕಾರಣ ಎಂದು ಬುದ್ಧಿ ಮಾತು ಹೇಳಿದ ತಂಗಿ ಶಕುಂತಲಾಳನ್ನು ಕೊಂದು ಈತ ಈಗ ಜೈಲು ಸೇರಿದ್ದಾನೆ. 2017ರಲ್ಲಿ ಈ ಕೊಲೆ ನಡೆದಿತ್ತು. ಆರೋಪಿ ಮೇಲೆ ಸಿರುಗುಪ್ಪದಲ್ಲಿ ಕೇಸು ದಾಖಲಾಗಿತ್ತು. ಆರೋಪಿ ವಿರುದ್ಧ ಸಿರುಗುಪ್ಪ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಸೀಟ್ ಸಲ್ಲಿಸಿದ್ದರು.

ಬಳ್ಳಾರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 15 ಸಾಕ್ಷಿಗಳ ವಿಚಾರಣೆ ನಡೆಸಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿದೆ. ಅಪರಾಧಿಗೆ ಜೀವಾವಧಿ ಶಿಕ್ಷೆ ಜೊತೆಗೆ 20 ಸಾವಿರ ದಂಡ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಅಂದಿನ ಅಭಿಯೋಜಕರಾದ ಲಕ್ಷ್ಮಿದೇವಿ ಪಾಟೀಲ್ ಅವರು ಸಾಕ್ಷಿ ವಿಚಾರಣೆ ಮಾಡಿದ್ದರು. ಸರ್ಕಾರಿ ಅಭಿಯೋಜಕ ಶೇಖರಪ್ಪ ವಾದ ಮಂಡಿಸಿದ್ದರು.

ಇದನ್ನೂ ಓದಿ: 'ಕನ್ಯತ್ವ ಪರೀಕ್ಷೆ'ಯಲ್ಲಿ ಫೇಲ್​ ಆದ ಯುವತಿ: ₹10 ಲಕ್ಷ ದಂಡ ವಿಧಿಸಿದ ಪಂಚಾಯ್ತಿ ಸದಸ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.