ಬಳ್ಳಾರಿ: ನಗರದ ಐತಿಹಾಸಿಕ ಮತ್ತು ಸಂರಕ್ಷಿತ ಸ್ಮಾರಕವಾದ ಬಳ್ಳಾರಿ ಗುಡ್ಡಕ್ಕೆ (ಫೋರ್ಟ್‍ಹಿಲ್) ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ರೋಪ್ ವೇ ಮತ್ತು ಇತರ ಅಗತ್ಯ ಸೌಲಭ್ಯ ಒದಗಿಸುವಂತೆ ಕೋರಿ ಹಂಪಿ ವಲಯದ ಪುರಾತತ್ವ ಇಲಾಖೆ ಕೇಂದ್ರ ಪುರಾತತ್ವ ಇಲಾಖೆಗೆ ಪತ್ರ ಬರೆದಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಐತಿಹಾಸಿಕ ಮತ್ತು ಸಂರಕ್ಷಿತ ಸ್ಮಾರಕವಾದ ಬಳ್ಳಾರಿ ಗುಡ್ಡಕ್ಕೆ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ರೋಪ್ ವೇ ಮತ್ತು ಇತರೆ ಅಗತ್ಯ ಸೌಲಭ್ಯ ಒದಗಿಸಲು ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲು ತೀರ್ಮಾನ ಮಾಡಲಾಗಿತ್ತು.
ಈ ಸಂಬಂಧ ಹಂಪಿ ವಲಯದ ಪುರಾತತ್ವ ಇಲಾಖೆಯು ಕೇಂದ್ರ ಪುರಾತತ್ವ ಇಲಾಖೆಗೆ ಈ ಯೋಜನೆಗೆ ಬೇಕಾದ ಅನುಮತಿ ಹಾಗೂ ನಿರ್ದೇಶನಗಳನ್ನು ನೀಡುವಂತೆ ಪತ್ರ ಬರೆದಿದೆ. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.