ETV Bharat / state

ಪ್ರಧಾನಿ ನರೇಂದ್ರ ಮೋದಿ ಮಾತನ್ನು ಕೇಳೋಣ: ಶಾಸಕ‌ ಸೋಮಶೇಖರ್ ರೆಡ್ಡಿ

ಲಾಕ್​ಡೌನ್ ಪರಿಣಾಮ ಬೇರೆ ದೇಶಗಳಿಗೆ ಹೋಲಿಸಿದರೆ ಕೊರೊನಾ ಸೋಂಕು ಧೃಡಪಟ್ಟಿರುವವರ ಸಂಖ್ಯೆ ಭಾರತದಲ್ಲಿ ಕಡಿಮೆ ಇದೆ ಎಂದು ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.

author img

By

Published : Apr 19, 2020, 5:28 PM IST

MLA G. Somashekar reddy
ಶಾಸಕ‌ ಜಿ. ಸೋಮಶೇಖರ್ ರೆಡ್ಡಿ

ಬಳ್ಳಾರಿ: ಭಾರತ ಲಾಕ್​ಡೌನ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಕೇಳೋಣ ಎಂದು ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.

ಶಾಸಕ‌ ಸೋಮಶೇಖರ್ ರೆಡ್ಡಿ
ನಗರದ ಪದ್ಮಶಾಲಿ ಕಲ್ಯಾಣ ಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಲಾಕ್​ಡೌನ್ ಸಡಿಲಿಕೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದೇಶ ಹೊರಡಿಸಿ ನಂತರ ವಾಪಸ್​ ಪಡೆದಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ಅವರು ಈಗ ಸಡಿಲಿಕೆ ಮಾಡುವುದು ಬೇಡ. ಲಾಕ್​ಡೌನ್ ಪರಿಣಾಮ ಬೇರೆ ದೇಶಗಳಿಗೆ ಹೋಲಿಸಿದರೆ ಕೊರೊನಾ ಸೋಂಕು ಧೃಡಪಟ್ಟಿರುವವರ ಸಂಖ್ಯೆ ಭಾರತದಲ್ಲಿ ಕಡಿಮೆ ಇದೆ. ಕೊರೊನಾ ವೈರಸ್ ಬಗ್ಗೆ ರಾಷ್ಟ್ರಮಟ್ಟದಲ್ಲಿ ತಿರ್ಮಾನಗಳು ಆಗುತ್ತಿದ್ದು, ಅದಕ್ಕೆ ನಾವು ಬದ್ಧವಾಗಿರುತ್ತವೆ ಎಂದರು.

ಬಿ.ಎಸ್ ಯಡಿಯೂರಪ್ಪ ಅವರದ್ದೇನೂ ತಪ್ಪಿಲ್ಲ: ಭಾರತ ಲಾಕ್​ಡೌನ್ ಆಗಿರುವುದರಿಂದ ಬಡ ಕೂಲಿ ಕಾರ್ಮಿಕರಿಗೆ ದಿನಗೂಲಿ ಇಲ್ಲದೇ ಹಸಿವಿನಿಂದ ಇರುವುದು ಕಷ್ಟವಾಗುತ್ತದೆ ಎಂಬ ಭಾವನೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಡಿಲಿಕೆ ಆದೇಶ ಹೊರಡಿಸಿದ್ರು. ಆದ್ರೆ ಮತ್ತೆ ಕೆಲ ವೃತ್ತಿಪರರು ಮತ್ತು ಜನರು ಲಾಕ್​ಡೌನ್ ಸಡಿಲಿಕೆ ಬೇಡ, ಮುಂದುವರೆಸಿ ಎಂದು ಹೇಳಿದ್ದಾರೆ. ಹಾಗಾಗಿ ಲಾಕ್​ಡೌನ್​ ಮೇ. 3ರವರೆಗೂ ಮುಂದೆವರೆಯುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.