ETV Bharat / state

ವಿಜಯನಗರ: ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವು - leopard dies in unknown vehicle collision

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ಚಿರತೆ ಮೃತಪಟ್ಟಿದೆ.

vijayanagar
ವಿಜಯನಗರ
author img

By

Published : Dec 7, 2022, 7:49 AM IST

ವಿಜಯನಗರ: ರಸ್ತೆ ದಾಟಲು ಮುಂದಾಗಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

ಶಿವಪುರ ಭಾಗದ ಕೂಡ್ಲಿಗಿ ಅರಣ್ಯ ವಲಯದಲ್ಲಿ ಎನ್​​ಆರ್‌ಇಜಿ ಕಾಮಗಾರಿ ಮಾಡಿಸಲು ಗಾರ್ಡ್ ನಾಗರಾಜ ಎಂಬುವರು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ ಹೆದ್ದಾರಿ 50ರ ರಸ್ತೆಯಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ಕಂಡು ತಕ್ಷಣ ಕೂಡ್ಲಿಗಿ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೊಸಪೇಟೆ ವಲಯಾರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಐದಾರು ವರ್ಷದ ಚಿರತೆ ಇದಾಗಿರಬಹುದು ಎಂದು ಅಂದಾಜಿಸಿದ್ದಾರೆ. ಚಿರತೆಯ ಮೃತ ದೇಹವನ್ನು ಹೊಸಪೇಟೆ ಅರಣ್ಯವಲಯದ ಕಚೇರಿಗೆ ತೆಗೆದುಕೊಂಡು ಹೋಗಿ ಶವಪರೀಕ್ಷೆ ನಡೆಸಿ ನಂತರ ಮೇಲಧಿಕಾರಿಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ಕಾರವಾರ : ಹಂದಿ ಉರುಳಿಗೆ ಬಿದ್ದು ಹೆಣ್ಣು ಚಿರತೆ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.