ETV Bharat / state

ವಿಜಯನಗರ: ಜನವಸತಿ ಪ್ರದೇಶದಲ್ಲಿ ಕರಡಿ, ಚಿರತೆ ಪ್ರತ್ಯಕ್ಷ - Leopard Bear spotted at residential area in Vijayanagar

ಹೊಸಪೇಟೆ ತಾಲೂಕಿನ ಎರಡು ಪ್ರತ್ಯೇಕ ಕಡೆಗಳಲ್ಲಿ ಕರಡಿ ಹಾಗೂ ಚಿರತೆ ಕಂಡು ಬಂದಿವೆ. ಜನವಸತಿ ಪ್ರದೇಶದಲ್ಲೇ ಕರಡಿ ಓಡಾಟ ನಡೆಸುತ್ತಿರುವುದು ಪತ್ತೆಯಾಗಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

Leopard, Bear spotted at residential area in Vijayanagar
ಜನವಸತಿ ಪ್ರದೇಶದಲ್ಲಿ ಕರಡಿ, ಚಿರತೆ ಪ್ರತ್ಯೆಕ್ಷ
author img

By

Published : Jun 2, 2021, 3:10 PM IST

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಕರಡಿ, ಚಿರತೆ ಪ್ರತ್ಯಕ್ಷವಾಗಿದ್ದು, ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಹಗರಿಬೊಮ್ಮನ ಹಳ್ಳಿ ತಾಲೂಕಿನ ಆನೇಕಲ್ಲು ಗ್ರಾಮದಲ್ಲಿ ರಾತ್ರಿ ಕರಡಿ ಪ್ರತ್ಯಕ್ಷವಾಗಿದೆ.

ಜನವಸತಿ ಜಾಗದಲ್ಲಿ ಸುತ್ತಾಡುತ್ತಿದ್ದ ಕರಡಿ ಕಂಡು ಜನ ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಕರಡಿ ರಾಜಾರೋಷವಾಗಿ ಊರಿನಲ್ಲಿ‌ ನುಗ್ಗಿರುವುದು ಜನರು ಬೆಚ್ಚಿ ಬೀಳುವಂತೆ ಮಾಡಿದೆ.

: ಜನವಸತಿ ಪ್ರದೇಶದಲ್ಲಿ ಕರಡಿ ಓಡಾಟ

ಇನ್ನೊಂದೆಡೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಣಾಯಕನಕೆರೆ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಚಿರತೆ ಓಡಾಟವನ್ನು ಜನರು ಮೊಬೈಲ್​​ನಲ್ಲಿ ಸೆರೆ ಹಿಡಿದ್ದಾರೆ. ಕಾಡು ಪ್ರಾಣಿಗಳ ಉಪಟಳದಿಂದ ಜನರು ಜೀವ ಕೈಯಲ್ಲಿ ಹಿಡಿದು ಗ್ರಾಮದೊಳಗೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಓದಿ: ಬಳ್ಳಾರಿ, ವಿಜಯನಗರದಲ್ಲಿ ಮುಂದಿನ 5 ದಿನಗಳ ಕಾಲ ಮಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.