ಬಳ್ಳಾರಿ: ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಕುರುಗೋಡು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಬಸಾಪುರ ಗ್ರಾಮದ ಹರಿಜನಕಾಲೋನಿಯ ರವಿ (30) ಬಂಧಿತ ಆರೋಪಿ. ಈತ ತನ್ನ ಮನೆಯ ಹಿಂಭಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದನು.
ಈ ಕುರಿತು ಖಚಿತ ಮಾಹಿತಿ ಪಡೆದ ಕುರುಗೋಡು ಪೊಲೀಸರು, ಅಕ್ರಮವಾಗಿ ಬೆಳೆದಿದ್ದ ಎಂಟು ಗಾಂಜಾ ಗಿಡಗಳು,50 ಗ್ರಾಂ ಒಣ ಗಾಂಜಾ ಸೇರಿದಂತೆ ಒಟ್ಟು 400 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಕುರುಗೋಡು ಠಾಣೆಯ ಪಿಎಸ್‍ಐ. ಎಂ. ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ಇದ್ದರು
ಈ ಸಮಯದಲ್ಲಿ ಕುರುಗೋಡು ತಹಶೀಲ್ದಾರ್ ರಾಘವೇಂದ್ರರಾವ್, ಗ್ರಾಮ ಲೆಕ್ಕಾಧಿಕಾರಿ ಯಮುನಪ್ಪ, ನಾಗರಾಜ್, ಊರಿನ ತಳವಾರ ಸೇರಿದಂತೆ ಇತರರು ಇದ್ದರು.