ETV Bharat / state

ಗಣಿನಾಡಲ್ಲಿ ಕೆಜಿಎಫ್​ ಚಾಪ್ಟರ್​ -2.. ಸಿನೆಮಾ ನೋಡಲು ಅಭಿಮಾನಿಗಳ ನೂಕುನುಗ್ಗಲು - ಬಳ್ಳಾರಿಯಲ್ಲಿ ಕೆಜಿಎಫ್​ ಚಾಪ್ಟರ್​ -2ಗೆ ಅದ್ಧೂರಿ ಸ್ವಾಗತ

ಬಳ್ಳಾರಿ ನಗರದಲ್ಲಿ ಕೆಜಿಎಫ್​ ಚಾಪ್ಟರ್​ -2 ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾನೆ ನಾಲ್ಕು ಗಂಟೆಗೇ ಮೊದಲ ಮೊದಲ ಶೋ ಆರಂಭವಾಗಿದೆ.

kgf-chapter-2-released-in-ballari
ಗಣಿನಾಡಲ್ಲಿ ಕೆಜಿಎಫ್​ ಚಾಪ್ಟರ್​ -2
author img

By

Published : Apr 14, 2022, 7:56 AM IST

Updated : Apr 14, 2022, 8:29 AM IST

ಬಳ್ಳಾರಿ: ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನೆಮಾ ಕೆಜಿಎಫ್​ ಚಾಪ್ಟರ್​ -2 ಇಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ನಗರದಲ್ಲೂ ಕೂಡ ಅದ್ಧೂರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಸಿನಿಮಾ ನೋಡಲು ರಾತ್ರಿಯಿಂದಲೇ ಕಾದು ಕುಳಿತಿದ್ದರಲ್ಲದೆ, ಚಿತ್ರಮಂದಿರದೊಳಗೆ ತೆರಳುವಾಗ ನೂಕುನುಗ್ಗಲು ಕಂಡುಬಂತು.

ಬಳ್ಳಾರಿಯಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಮೊದಲ ಶೋ ಆರಂಭವಾಗಿದೆ. ಏಕಕಾಲಕ್ಕೆ ಬಳ್ಳಾರಿಯ ಆರು ಚಿತ್ರ ಮಂದಿರಗಳಲ್ಲಿ ಕೆಜಿಎಫ್​ ಚಾಪ್ಟರ್​ -2 ಸಿನಿಮಾ ರಿಲೀಸ್ ಆಗಿದೆ. ಚಿತ್ರಕ್ಕಾಗಿ ಎರಡು ವರ್ಷಗಳಿಂದ ಕಾದಿದ್ದ ಯಶ್ ಅಭಿಮಾನಿಗಳು, ನೆಚ್ಚಿನ ನಟನನ್ನು ತೆರೆ ಮೇಲೆ ಕಂಡು ಕುಣಿದು ಕುಪ್ಪಳಿಸಿದರು. ಅಲ್ಲದೆ, ಸಿನೆಮಾ ಮಂದಿರಗಳೆದುರು ಪಟಾಕಿ ಸಿಡಿಸಿ ಸ್ವಾಗತಿಸಿದರು.

ಕೆಜಿಎಫ್​ ಚಾಪ್ಟರ್​ -2 ನೋಡಲು ಅಭಿಮಾನಿಗಳ ನೂಕುನುಗ್ಗಲು

ಅಭಿಮಾನಿಗಳು ಟಾಕೀಸ್​​ನೊಳಗೆ ತೆರಳುತ್ತಿದ್ದಾಗ ಕೆಲಕಾಲ ನೂಕುನುಗ್ಗಲು ಕಂಡು ಬಂತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಿಸಿದರು.

ಇದನ್ನೂ ಓದಿ: ಕೆಜಿಎಫ್​ ಸಿನಿಮಾಗೆ ಡಾ.ರಾಜ್​ ಕುಟುಂಬದಿಂದ ಆಲ್​ ದಿ ಬೆಸ್ಟ್: ವಿಶ್ವಾದ್ಯಂತ ಯಶಸ್ಸಿಗೆ ಹಾರೈಕೆ

Last Updated : Apr 14, 2022, 8:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.