ETV Bharat / state

ಕುಡಿವ ನೀರಿಗೆ ವಿಷ ಹಾಕುವವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ: ಸಚಿವ ಆನಂದ ಸಿಂಗ್ - Karnataka State Pollution Control Board

ಕುಡಿಯುವ ನೀರಿಗೆ ವಿಷ ಹಾಕುವವರ ಮೇಲೆ ಮರ್ಡರ್ ಕೇಸ್ ಹಾಕಬೇಕು. ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಬಂದರೆ ಹಣಕ್ಕಾಗಿ ಬರುತ್ತಾರೆ ಎಂಬ ಜನರ ಭಾವನೆ ತೆಗೆದುಹಾಕಬೇಕು ಎಂದು ಸಚಿವ ಆನಂದ ಸಿಂಗ್ ಹೇಳಿದರು.

Karnataka State Pollution Control Board
ಸಚಿವ ಆನಂದ ಸಿಂಗ್
author img

By

Published : Aug 25, 2021, 9:47 PM IST

ಬಳ್ಳಾರಿ: ಕುಡಿಯುವ ನೀರಿಗೆ ವಿಷ ಹಾಕುವವರ ಮೇಲೆ ಮರ್ಡರ್ ಕೇಸ್ ಹಾಕಬೇಕು. ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಬಂದ್ರೆ ಹಣಕ್ಕಾಗಿ ಬರುತ್ತಾರೆ ಎಂಬ ಜನರ ಭಾವನೆ ತೆಗೆದುಹಾಕಬೇಕು. ಕೇಸ್ ಹಾಕಲು ಬೇಕಾದ ವಿಶೇಷವಾದ ಕಾನೂನು ಬಗ್ಗೆ ಕ್ಯಾಬಿನೆಟ್​ನಲ್ಲಿ ಚರ್ಚಿಸಲು ಸಿದ್ಧ ಎಂದು ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದ್ದಾರೆ.

ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಯಲ್ಲಿಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರ ಮಾಲಿನ್ಯ ಮಾಡುವವರ ವಿರುದ್ಧ ಮಾಲಿನ್ಯ ಮಂಡಳಿಗೆ ವಿಶೇಷ ಅಸ್ತ್ರ ಇಲ್ಲ. ಹೀಗಾದಾಗ ಪೋಲಿಸ್ ಠಾಣೆಗಳಲ್ಲಿ ಎಫ್​ಐಆರ್ ಆಗುವುದಿಲ್ಲ. ಅದೇ ರೀತಿ ಮಾಲಿನ್ಯ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.

10 ಲಕ್ಷ ಅರಿಶಿನ ಗಣಪತಿಗೆ ಮೆಚ್ಚುಗೆ:

ಈ ಬಾರಿ ಗಣಪತಿ ಹಬ್ಬಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ವಿಶೇಷ ಯೋಜನೆ ರೂಪಿಸಿದ್ದು, 10 ಲಕ್ಷ ಅರಿಶಿನ ಗಣಪತಿ ತಯಾರಿಸುವ ಗುರಿಹೊಂದಿದೆ. ಈ ಕಾರ್ಯಕ್ರಮಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.