ETV Bharat / state

ಮತದಾನ ದಿನ ಪ್ರವಾಸಿಗರಿಲ್ಲದೆ ಬಣಗುಟ್ಟಿದ ವಿಶ್ವವಿಖ್ಯಾತ ಹಂಪಿ - karnataka election 2023

ರಾಜ್ಯ ಚುನಾವಣಾ ಮತದಾನ ಹಿನ್ನೆಲೆ ಕೆಎಸ್​​ಆರ್​​ಟಿಸಿ ಬಸ್​​ಗಳನ್ನು ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದ್ದು, ಬಸ್​​ ನಿಲ್ದಾಣದಲ್ಲಿ ಬಸ್​ ಇಲ್ಲದೇ ಪ್ರಯಾಣಿಕರು ಪರದಾಡಿದರು.

karnataka-assembly-election-2023-hampi-is-world-famous-for-hitting-blanks
ಮತದಾನ ಹಿನ್ನೆಲೆಯಲ್ಲಿ ಬಣಗುಟ್ಟಿದ ವಿಶ್ವವಿಖ್ಯಾತ ಹಂಪಿ
author img

By

Published : May 10, 2023, 6:51 PM IST

Updated : May 10, 2023, 7:09 PM IST

ಮತದಾನ ದಿನ ಪ್ರವಾಸಿಗರಿಲ್ಲದೆ ಬಣಗುಟ್ಟಿದ ವಿಶ್ವವಿಖ್ಯಾತ ಹಂಪಿ

ವಿಜಯನಗರ: ಒಂದೆಡೆ ಬೇಸಿಗೆ ಎಫೆಕ್ಟ್‌ ಮತ್ತೊಂದೆಡೆ ಚುನಾವಣೆ ಮತದಾನ ಕಾರ್ಯ ಹಿನ್ನೆಲೆಯಲ್ಲಿ ವಿಶ್ವ ಪಾರಂಪರಿಕ ತಾಣ ಹಂಪಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದವು. ಇತ್ತ ಪ್ರವಾಸಿ ತಾಣಗಳನ್ನೇ ನಂಬಿರುವ ವ್ಯಾಪಾರಸ್ಥರು, ಮಾರ್ಗದರ್ಶಿಗಳ ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಸದ್ಯ ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಜತೆಗೆ ರಾಜ್ಯದಲ್ಲಿ ಇಂದು ಮತದಾನ ನಡೆಯುತ್ತಿರುವ ಬೆನ್ನಲ್ಲೇ ನೆರೆ ರಾಜ್ಯದ ಎಣಿಕೆಯಷ್ಟು ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ.

ಇನ್ನು ಸ್ಥಳೀಯರು ಸೇರಿ ರಾಜ್ಯದ ನಾನಾ ಕಡೆಯ ಪ್ರವಾಸಿಗರು ಸಂಖ್ಯೆ ಅತಿ ವಿರಳವಾಗಿತ್ತು. ವಿಶ್ವದಲ್ಲಿ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹಂಪಿ, ದೇಶ ಮತ್ತು ವಿದೇಶದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಆದರೆ, ಮತದಾನದ ಹಿನ್ನೆಲೆಯಲ್ಲಿ ಹಂಪಿ ಸೇರಿ ತುಂಗಾಭದ್ರಾ ಅಣೆಕಟ್ಟು, ಕರಡಿ ಧಾಮ, ಹಂಪಿ ಮೃಗಾಲಯ ಸೇರಿ‌ದಂತೆ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೇ ಬಣಗುಟ್ಟಿದವು. ಬೇಸಿಗೆಯಿಂದಾಗಿ ಸದ್ಯ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಪ್ರವಾಸಿಗರನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನೂರಾರು ಪ್ರವಾಸಿ ಮಾರ್ಗದರ್ಶಿಗಳು, ಸಣ್ಣ ವ್ಯಾಪಾರಸ್ಥರ ವ್ಯಾಪಾರ ವಹಿವಾಟಿನಲ್ಲಿ ನಷ್ಟದ ಛಾಯೆ ಕಂಡಿದೆ.

ಪರದಾಡಿದ ಪ್ರಯಾಣಿಕರು: ಮತದಾನ ಹಿನ್ನೆಲೆಯಲ್ಲಿ ಕೆಎಸ್​​​ಆರ್​​ಟಿಸಿ ಬಸ್​​ಗಳನ್ನು ಒಪ್ಪಂದ ಮೇರೆಗೆ ಚುನಾವಣಾ ಆಯೋಗ ಪಡೆದಿದೆ. ಆದ್ದರಿಂದ ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣ, ತಾಲೂಕು ಕೇಂದ್ರಗಳು ಸೇರಿ ಇತರೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ ಇಲ್ಲದೇ ಪರದಾಡಿದ ಪ್ರಸಂಗ ಎದುರಾಯಿತು. ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳೊಂದಿಗೆ ಜನರು ವಾಗ್ವಾದ ನಡೆಯಿತು. ಗ್ರಾಮೀಣ ಭಾಗಗಳಲ್ಲಿ ಬಸ್​​​ಗಳೆ ಬಾರದ ಹಿನ್ನೆಲೆಯಲ್ಲಿ ಜನರು ಪ್ರಯಾಣ ರದ್ದುಪಡಿಸಿದರೆ. ಇನ್ನೂ ಕೆಲವರು ಖಾಸಗಿ ವಾಹನಗಳ ಮೊರೆ ಹೋದರು.

ಇದನ್ನೂ ಓದಿ: ಕರ್ನಾಟಕ ಎಲೆಕ್ಷನ್​ ಹವಾ: ಮತ ಚಲಾಯಿಸಿದ ರಾಜಕೀಯ ನಾಯಕರು, ಅಭ್ಯರ್ಥಿಗಳು! ಫೋಟೋಗಳಲ್ಲಿ ನೋಡಿ!!

ಮತ ಚಲಾಯಿಸಿದ ಮಂಜಮ್ಮ ಜೋಗತಿ: ರಾಜ್ಯದಲ್ಲಿ ಇಂದು ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದು, ರಾಜ್ಯ ಚುನಾವಣಾ ಆಯೋಗದ ರಾಯಭಾರಿ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಇಂದು ಬೆಳಗ್ಗೆ ಮತದಾನ ಮಾಡಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಮರಿಯಮ್ಮನಹಳ್ಳಿ ಪಟ್ಟಣದ 60ನೇ ಮತಗಟ್ಟೆಯಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ತಮ್ಮ ಹಕ್ಕು ಚಲಾಯಿಸಿದರು.

ಮತ ಚಲಾಯಿಸಿದ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಚುನಾವಣೆ ಅಂದರೆ ಭಾರತ ದೇಶದ ಬಹುದೊಡ್ಡ ಹಬ್ಬ ಎಂದು ನಾನು ಭಾವಿಸಿದ್ದೇನೆ. ಪ್ರತಿಯೊಬ್ಬ ಪ್ರಜೆಯು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ. ಹೆಚ್ಚಿನ‌ ಸಂಖ್ಯೆಯಲ್ಲಿ ನಮ್ಮ ತೃತೀಯ ಲಿಂಗಿಗಳು ಚುನಾವಣೆಯಲ್ಲಿ ಭಾಗವಹಿಸಿ. ರಾಜ್ಯದ ಪ್ರತಿಯೊಬ್ಬ ಯುವಕ ಮತ್ತು ಯುವತಿಯರು ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಿ" ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಮೊದಲ ಬಾರಿಗೆ ಮತ ಹಾಕಿದ ತೃತೀಯ ಲಿಂಗಿ.. ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡ ಪ್ರಣತಿ ಪ್ರಕಾಶ್..

Last Updated : May 10, 2023, 7:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.