ETV Bharat / state

ಬಳ್ಳಾರಿಯ ಕನಕದುರ್ಗಮ್ಮ ರಸ್ತೆಯಲ್ಲೆಲ್ಲ ಜಲಧಾರೆ.. ಇದು ಯಾರ ನಿರ್ಲಕ್ಷ್ಯ - ಪೈಪ್​ ಲೈನ್​​ ಒಡೆದು ನೀರು ಪೋಲು

ಪೈಪ್​ ಲೈನ್​ ಒಡೆದ ಕಾರಣದಿಂದಾಗಿ ಬಳ್ಳಾರಿಯ ಕನಕದುರ್ಗಮ್ಮ ರಸ್ತೆಯಲ್ಲ ಜಲಾವೃತಗೊಂಡಿದ್ದು, ಸಾಕಷ್ಟು ನೀರು ಪೋಲಾಗುತ್ತಿದೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ರಸ್ತೆಯಲ್ಲಾ ಜಲಧಾರೆ
author img

By

Published : Sep 17, 2019, 9:26 AM IST

ಬಳ್ಳಾರಿ: ನಗರದ ಕನಕದುರ್ಗಮ್ಮ ಡಬಲ್ ರಸ್ತೆಯ ಮಧ್ಯೆ ಭಾಗದಲ್ಲಿರುವ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ರಸ್ತೆಯ ತುಂಬಾ ಜಲಧಾರೆ ಸೃಷ್ಟಿಯಾಗಿದೆ.

ರಸ್ತೆಯಲ್ಲೆಲ್ಲಾ ಜಲಧಾರೆ

ಸೋಮವಾರ ಮಧ್ಯರಾತ್ರಿ ಈ ಪೈಪ್ ಲೈನ್ ಒಡೆದಿದ್ದು, ವಿಪರೀತ ನೀರು ಸೋರಿಕೆ ಆಗಿ ಹಳ್ಳದಂತೆ ಈ ನೀರು ಹರಿಯಲಾರಂಭಿಸಿದೆ. ಮಧ್ಯರಾತ್ರಿಯಿಂದ ಒಂದೇ ಸಮನೆ ಹರಿಯುತ್ತಿರುವ ನೀರಿನಲ್ಲೇ ಲಘು ಮತ್ತು ಮೋಟಾರ್ ವಾಹನಗಳು ಸಂಚರಿಸುತ್ತಿವೆ. ಬೆಳಗ್ಗೆಯಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕುಡಿಯುವುದಕ್ಕೆ ನೀರಿನ ಸಮಸ್ಯೆ ಇದೆ. ಆದರೆ, ಇಲ್ಲಿ ಅನಗತ್ಯವಾಗಿ ನೀರು ಪೋಲಾಗುತ್ತದೆ. ಈ ಹಿಂದೆಯೂ ಕೂಡ ಇದೇ ಜಾಗದಲ್ಲಿ ಪೈಪ್ ಲೈನ್ ಒಡೆದು ಹೋಗಿತ್ತು. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಬಳ್ಳಾರಿ ಕನಕದುರ್ಗಮ್ಮ ರಸ್ತೆಯೆಲ್ಲಾ ಹರಿದ ಜಲಧಾರೆ
ಬಳ್ಳಾರಿ: ಇಲ್ಲಿನ ಕನಕದುರ್ಗಮ್ಮ ಡಬಲ್ ರಸ್ತೆಯ ಮಧ್ಯೆ ಭಾಗದಲ್ಲಿರುವ ಕುಡಿಯುವ ನೀರಿನ ಪೈಪ್ ಲೈನ್ ಹೊಡೆದು ರಸ್ತೆಯೆಲ್ಲಾ ಜಲಧಾರೆ ಹರಿದಿದೆ.
ಸೋಮವಾರ ಮಧ್ಯೆರಾತ್ರಿ ಅಥವಾ ಮಂಗಳವಾರ ನಸುಕಿನ
ಜಾವ ಈ ಪೈಪ್ ಲೈನ್ ಹೊಡೆದಿದ್ದು, ವಿಪರೀತ ನೀರು ಸೋರಿಕೆ ಆಗುತ್ತಿದೆ. ಹಳ್ಳದಂತೆ ಈ ನೀರು ಹರಿಯುತ್ತಿದೆ. ಈ ಹಿಂದೆಯೂ ಕೂಡ ಇದೇ ಜಾಗದಲ್ಲಿ ಪೈಪ್ ಲೈನ್ ಹೊಡೆದು ಹೋಗಿತ್ತು.
ಎಲ್ ವಿ ನರ್ಸಿಂಗ್ ಹೋಂ ಮುಂದಿನ ರಸ್ತೆಯಲ್ಲೇ ಈ ಪೈಪ್
ಲೈನ್ ಹೊಡೆದಿರೋದು ಎನ್ನಲಾಗುತ್ತಿದೆ. ಇಳಿಜಾರು ಪ್ರದೇಶಕ್ಕೆ ಜಲಧಾರೆ ಹರಿದು ಹಂಚಿ ಹೋಗುತ್ತಿದೆ.‌ ನಸುಕಿನ ಜಾವದಿಂದಲೇ ಒಂದೇ ಸಮನೆ ಹರಿಯುತ್ತಿರುವ ನೀರಿನಲ್ಲೇ ಲಘು ಮತ್ತು ಮೋಟಾರ್ ವಾಹನಗಳು ಸಂಚರಿಸುತ್ತಿವೆ. ಬೆಳಿಗ್ಗೆಯಾದ್ರೂ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೇತ್ತುಕೊಳ್ಳದಿ ರೋದಕ್ಕೆ ಇಂತಹ ಅಚಾತುರ್ಯ ನಡೆದು ಹೋಗಿದೆ ಎನ್ನಲಾಗುತ್ತಿದೆ.
Body:ಇಳಿಜಾರು ಪ್ರದೇಶಗಳಾದ ತಾಳೂರು ರಸ್ತೆ, ಮ್ಯಾಕ್ಸ್ ಷೋ ರಸ್ತೆ ಸೇರಿದಂತೆ ಇನ್ನಿತರೆ ತಗ್ಗು ಪ್ರದೇಶಗಳಿಗೆ ಈ ನೀರಿನ ಕೋಡಿ ಹರಿಯುತ್ತಿದ್ದು, ಇದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಕುಡಿಯಲಿಕ್ಕೆ ನೀರಿಲ್ಲಾಂದ್ರೆ, ಇಲ್ಲಿ ಅನಗತ್ಯವಾಗಿ ಕುಡಿಯುವ ನೀರು ಪೋಲಾಗುತ್ತದೆ. ರಾತ್ರಿವೇಳೆ ಎಚ್ಚೇತ್ತುಕೊಳ್ಳದೇ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಮತನದ ಧೋರಣೆ ತಳೆದಿದ್ದಾರೆ ಎಂದು ಬಾಬೆಗಿರಿ ಮತ್ತಿತರರು ದೂರಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_DRINKING_WATER_PIPELINE_DAMAGE_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.