ಬಳ್ಳಾರಿ: ಮಾರ್ಚ್ 3ರಂದು ಗಡಿನಾಡು ಬಳ್ಳಾರಿಯಲ್ಲಿ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ ನಡೆಯಲಿದೆ. ಈ ಉತ್ಸವ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ದೇವಸ್ಥಾನದ ಕಾರ್ಯದರ್ಶಿ ಪಿ.ಗಾದೆಪ್ಪ, ಸೋಮವಾರ ಸಂಜೆ ಸಿಡಿಬಂಡಿ ಕನಕದುರ್ಗಮ್ಮ ಗುಡಿ ಮುಂದೆ ನಿಲ್ಲುತ್ತದೆ. ಮಂಗಳವಾರ ಬೆಳಗ್ಗೆ ಸಂಪ್ರದಾಯ ಪದ್ಧತಿಯ ರೂಪದಲ್ಲಿ ಬೆಣ್ಣೆ ಕುಂಬ, ಎತ್ತುಗಳ ಮೆರವಣಿಗೆ ನಡೆಯುತ್ತದೆ. ಅಂದು ಸಂಜೆ 5 ಗಂಟೆಗೆ ಸಿಡಿ ಉತ್ಸವ ಕನಕ ದುರ್ಗಮ್ಮ ದೇವಸ್ಥಾನದ ದೇವಿಯ ಸುತ್ತಲೂ ಮೂರು ಸತ್ತುಗಳ ಪ್ರದರ್ಶನವನ್ನು ಹಾಕಲಾಗುತ್ತದೆ. ಬುಧವಾರ ಸಂಜೆ ಸಿಡಿ ಬಂಡಿ ಮುಕ್ತಾಯವಾಗುತ್ತದೆ ಎಂದು ಹೇಳಿದರು.
![Kanakadurgamma sidibandi festival, Kanakadurgamma sidibandi festival on March 3, Kanakadurgamma sidibandi festival on March 3 in Bellary, ಕನಕದುರ್ಗಮ್ಮ ಸಿಡಿಬಂಡಿ ಉತ್ಸವ, ಬಳ್ಳಾರಿಯಲ್ಲಿ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ, ಬಳ್ಳಾರಿಯಲ್ಲಿ ಮಾರ್ಚ್ 3ರಂದು ಕನಕದುರ್ಗಮ್ಮ ಸಿಡಿಬಂಡಿ ಉತ್ಸವ,](https://etvbharatimages.akamaized.net/etvbharat/prod-images/6166208_sidi.jpg)
ವಿಶೇಷವಾಗಿ ಜಾತ್ರೆಗೆ ಉಚಿತ ಬಸ್ ವ್ಯವಸ್ಥೆ: ಈ ಬಾರಿ ಸಿಡಿಬಂಡಿ ನೋಡಲು 35 ಉಚಿತ ಬಸ್ಗಳನ್ನ ಹಳ್ಳಿಗಳಿಂದ ಬಿಡಲಾಗಿದೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಇರುತ್ತವೆ ಎಂದು ತಿಳಿಸಿದರು. 140 ಹಳ್ಳಿಗಳಿಂದ ಬರುವ ಭಕ್ತರಿಗೆ ಅನುಕೂಲಕರವಾಗಿರಲಿ ಎನ್ನುವ ಉದ್ದೇಶವಾಗಿದೆ.
ಜಾನಪದ ಜಾತ್ರೆ: ಈ ಬಾರಿ ಕನಕದುರ್ಗಮ್ಮನ ಸಿಡಿಗೆ ಮಂಗಳವಾರ ಮಧ್ಯಾಹ್ನದಿಂದಲ್ಲೇ ಜಾನಪದ ಜಾತ್ರೆ ಎನ್ನುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ದೇವಸ್ಥಾನದ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ. ಸಿಡಿ ಉತ್ಸವ ನೋಡಲು ಭಕ್ತರ ಸಂಖ್ಯೆ ಹೆಚ್ಚಾಗಿ ಬರುವುದರಿಂದ 10*10 ಅಡಿಯ 4 ಎಲ್.ಇ.ಡಿ ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಪಿ.ಗಾದೆಪ್ಪ ಹೇಳಿದರು.