ETV Bharat / state

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕೂಡ್ಲಿಗಿ ತ್ರಿಶಂಕು, ಕಂಪ್ಲಿಯಲ್ಲಿ ಕೇಸರಿ ಪಾರುಪತ್ಯ - ಕೂಡ್ಲಿಗಿ ಪಟ್ಟಣ ಪಂಚಾಯತ್​ ಮತ ಎಣಿಕೆ

ನಗರ ಸ್ಥಳಿಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯತ್​ ಅತಂತ್ರವಾಗಿದ್ದು, ಕಂಪ್ಲಿ ಪುರಸಭೆಯಲ್ಲಿ ಕೇಸರಿ ಪಾರುಪತ್ಯ ಮೆರೆದಿದೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆ
author img

By

Published : Nov 14, 2019, 2:34 PM IST

ಬಳ್ಳಾರಿ: ಭಾರೀ ಕುತೂಹಲ ಮೂಡಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯತ್​ ಅತಂತ್ರವಾಗಿದ್ದು, ಕಂಪ್ಲಿ ಪುರಸಭೆಯಲ್ಲಿ ಕೇಸರಿ ಪಾರುಪತ್ಯವಾಗಿದೆ.

ಕೂಡ್ಲಿಗಿಯಲ್ಲಿ ಈ ಹಿಂದೆಯೂ ತ್ರಿಶಂಕು ಸ್ಥಿತಿಯಲ್ಲೇ ಆಡಳಿತ ನಡೆಯುತ್ತಿತ್ತು. ಈ ಭಾರಿಯೂ ಮತದಾರ ಪ್ರಭು ತ್ರಿಶಂಕು ಸ್ಥಿತಿಯತ್ತ ಸಾಗುವಂತೆ ಮಾಡಿದ್ದಾನೆ. ಕಾಂಗ್ರೆಸ್‌ನ 6, ಬಿಜೆಪಿಯ 7, ಜೆಡಿಎಸ್‌ 4 ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ

ಜೆಡಿಎಸ್ ಮತ್ತು ಪಕ್ಷೇತರರೇ ನಿರ್ಣಾಯಕರು:

ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರೇ ಕೂಡ್ಲಿಗಿಯಲ್ಲಿ ನಿರ್ಣಾಯಕರಾಗಿದ್ದಾರೆ. ಹೀಗಾಗಿ ಜೆಡಿಎಸ್ ಮತ್ತು ಪಕ್ಷೇತರರನ್ನು ತಮ್ಮತ್ತ ಸೆಳೆಯಲು ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಕಸರತ್ತು ಪ್ರಾರಂಭಿಸಿದ್ದಾರೆ.

ಕಂಪ್ಲಿ ಪುರಸಭೆಯಲಿ ಬಿಜೆಪಿ ಮೇಲುಗೈ:

ಕಂಪ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್​ಗೆ ಮತದಾರ ಮಣೆ ಹಾಕಿದ್ದಾನೆ. ಆದರೆ ಈ ಬಾರಿಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಮಲಕ್ಕೆ ಜೈ ಎಂದಿದ್ದಾನೆ. ಕಂಪ್ಲಿ ಪುರಸಭೆಯ 23 ವಾರ್ಡುಗಳ ಪೈಕಿ ಬಿಜೆಪಿ 13, ಕಾಂಗ್ರೆಸ್ 10 ಸ್ಥಾನಗಳನ್ನು ಪಡೆದುಕೊಂಡಿದೆ.

ಶಾಂತಿಯುತ ಮತ ಎಣಿಕೆ:

ಕಂಪ್ಲಿ ಪುರಸಭೆಯ ಮತ ಎಣಿಕೆ 4 ಸುತ್ತಿನಲ್ಲಿ ನಡೆದಿದೆ. ಶಾಂತಿಯುತವಾಗಿ ಹಾಗೂ ಸುರಕ್ಷಿತವಾಗಿ ಮತಎಣಿಕೆ ಮುಕ್ತಾಯವಾಗಿದೆ ಎಂದು ಚುನಾವಣಾಧಿಕಾರಿ ಷಣ್ಮುಖಪ್ಪ ಎಸ್.ಪಿ.ಮಾಹಿತಿ ನೀಡಿದರು.

ಕಂಪ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆಯ ಮತ ಎಣಿಕೆ ನಡೆದಿದ್ದು, ಮತ ಎಣಿಕೆ ಸಮಯದಲ್ಲಿ ಸಾರ್ವಜನಿಕರು ಚುನಾಯಿತ ಅಭ್ಯರ್ಥಿಗಳು ಶಾಂತ ಚಿತ್ತರಾಗಿ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ನೀತಿ ಸಂಹಿತೆ ಜಾರಿಯಾದ ಕಾರಣ ಪೊಲೀಸರು ಬಣ್ಣ ಹಾಕುವುದಕ್ಕೆ ಮತ್ತು ಪಟಾಕಿ ಹಚ್ಚುವುದಕ್ಕೆ ಅವಕಾಶವನ್ನು ನೀಡಿಲ್ಲ ತಿಳಿಸಿದರು.

ಮತ ಎಣಿಯು ನಾಲ್ಕು ಕೌಂಟರ್​ಗಳಲ್ಲಿ ನಡೆಯಿತು. ಈ ವೇಳೆ ಅಹಿತಕರ ಘಟನೆ ನಡಿಯಬಾರದೆಂದು ಪೊಲೀಸ್​ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಮಾಡಿಕೊಂಡಿತ್ತು. ಸಾರ್ವಜನಿಕರು ಹಾಗೂ ಎಲ್ಲಾ ಚುನಾವಣಾ ಸಿಬ್ಬಂದಿಗಳ ಸಹಕಾರದಿಂದ ಫಲಿತಾಂಶ ಪ್ರಕಟವಾಗಿದೆ ಎಂದರು.

Intro: ಕಂಪ್ಲಿ ಪುರಸಭೆಯ ಫಲಿತಾಂಶ ಪ್ರಕಟ
ಕಂಪ್ಲಿ : ಕಂಪ್ಲಿ ಪುರಸಭೆಯ ಮತ ಎಣಿಕೆಯು 4 ಸುತ್ತಿನಲ್ಲಿ ನಡೆದಿದೆ. ಶಾಂತಯುತವಾಗಿ ಹಾಗೂ ಸುರಕ್ಷಿತವಾಗಿ ಎಣಿಕೆಯು ಮುಕ್ತಾಯವಾಗಿದೆ ಎಂದು ಚುನಾವಣೆ ಅಧಿಕಾರಿ ಷಣ್ಮುಖಪ್ಪ ಎಸ್.ಪಿ.ಮಾಹಿತಿ ನೀಡಿದರು.

Body: ಕಂಪ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಬೆಳಗ್ಗೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಮತ ಎಣಿಕೆ ಸಮಯದಲ್ಲಿ ಸಾರ್ವಜನಿಕರು ಚುನಾಯಿತ ಅಭ್ಯರ್ಥಿಗಳು ಸಹಕಾರ ಮತ್ತು ಶಾಂತಿಯಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ನೀತಿ ಸಂಹಿತೆ ಜಾರಿಯಾದ ಕಾರಣ ಪೊಲೀಸರು ಬಣ್ಣ ಹಾಕುವುದಕ್ಕೆ ಮತ್ತು ಪಟಾಕಿ ಹಚ್ಚುವುದಕ್ಕೆ ಅವಕಾಶವನ್ನು ನೀಡಲ್ಲ ಎಂದು ಚುನಾವಣೆಯ ಅಧಿಕಾರಿ ಷಣ್ಮುಖಪ್ಪ ಎಸ್.ಪಿ.ತಿಳಿಸಿದರು.
ಮತ ಎಣಿಯು ನಾಲ್ಕು ಕೌಂಟರ್ ಗಳಲ್ಲಿ ನಡೆಯಿತು.ಈ ಸಮಯದಲ್ಲಿ ಅಹಿತಕರ ಘಟನೆ ನಡಿಯಬಾರದೆಂದು ಪೊಲೀಸ ಇಲಾಖೆಯು ಮುಂಜಾಗ್ರತ ಕ್ರಮವಾಗಿ ಬದ್ರತೆಯನ್ನು ಮಾಡಿಕೊಂಡಿತ್ತು. ಜನರಿಗೆ ಶಾಂತಿಯಿಂದ ಹಾಗೂ ಸಮಾಧಾನವಾಗಿ ಪೊಲೀಸ ಅಧಿಕಾರಿಗಳು ತಿಳಿವಳಿಕೆ ಹೇಳಿದರು. ಸಾರ್ವಜನಿಕರು ಹಾಗೂ ಎಲ್ಲಾ ಚುನಾವಣಿಯ ಸಿಬ್ಬಂದಿಗಳು ಸಹಕಾರದಿಂದ ಫಲಿತಾಂಶ ಪ್ರಕಟವಾಗಿದೆ ಎಂದು ಈ.ಟಿ.ವಿ‌.ಭಾರತದೊಂದಿಗೆ ಮಾತನಾಡಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.