ಬಳ್ಳಾರಿ: ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಕಂಬನಿ ಮಿಡಿದಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯ ಬಳಿಕ ಈ ಟಿವಿ ಭಾರತ ದೊಂದಿಗೆ ಮಾತನಾಡಿದ ಮಂಜಮ್ಮ ಜೋಗತಿ, ನಟಿ ಜಯಂತಿ ಅವರ ಅಗಲಿಕೆ ಇಡೀ ಕನ್ನಡ ಚಿತ್ರರಂಗಕ್ಕೆ ಒಂದು ನೋವಾದ್ರೆ ಗಣಿನಾಡು ಬಳ್ಳಾರಿ ಜಿಲ್ಲೆಯ ಮಗಳನ್ನ ಕಳೆದುಕೊಂಡು ಈ ಜಿಲ್ಲೆಯು ಇವತ್ತು ಬಡವಾಗಿದೆಂದು ಮಂಜಮ್ಮ ಜೋಗತಿ ಗದ್ಗರಿತರಾದ್ರು.
ನಾವೆಲ್ಲಾ ಹಿರಿಯ ಕಲಾವಿದರಿದ್ದೀವಿ. ನಮಗೆಲ್ಲಾ ಯಾವುದೇ ಕಲಾಭಿನಯದ ತರಬೇತಿ ನೀಡಲು ಗುರುಗಳು ಇರಲಿಲ್ಲ. ನಮಗೆ ಜಯಂತಿ, ಲೀಲಾವತಿ, ಪಂಡರಿಬಾಯಿ ಸೇರಿ ಇನ್ನಿತರೆ ನಟಿಯರ ಅತ್ಯದ್ಭುತ ಕಲಾಭಿನಯವೇ ನಮಗೆ ಸ್ಪೂರ್ತಿದಾಯಕ ಆಗಿತ್ತು. ಖ್ಯಾತ ಗಾಯಕರ ಸಂಗೀತಕ್ಕೆ ಕುಣಿದ ಅವರ ನೃತ್ಯವನ್ನ ನೋಡಿಯೇ ನಾವೆಲ್ಲಾ ಕಲಿತಿದ್ದೇವೆ. ಅಂಥಹ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅಗಲಿಕೆ ನಮಗೆ ಬಹಳ ದುಃಖ ತಂದಿದೆ ಎಂದು ಮಂಜಮ್ಮಿ ತಿಳಿಸಿದ್ದಾರೆ.
ಇದನ್ನು ಓದಿ:‘ನಯನ’ದಲ್ಲಿ ಚಿರಕಾಲ ಉಳಿದ ಅಭಿನಯ ಶಾರದೆ: ಪುಟ್ಟ ಮಗುವಿಗೆ ಕಣ್ಣು ದಾನ