ETV Bharat / state

ಖಾತೆಗಾಗಿ ಮುಂದುವರೆದ ಮುನಿಸು: ಗೋವಾ ಮೂಲಕ ದೆಹಲಿಗೆ ತೆರಳಿದ ಆನಂದ್ ಸಿಂಗ್ - ಪ್ರಭಾವಿ ಖಾತೆಗಾಗಿ ಆನಂದ್ ಸಿಂಗ್ ದೆಹಲಿಗೆ ಭೇಟಿ

ಆನಂದ್​​ ಸಿಂಗ್​ ನಿನ್ನೆ ಹೊಸಪೇಟೆಯಿಂದ ಯಲ್ಲಾಪುರಕ್ಕೆ ತೆರಳಿದ್ದು, ಅಲ್ಲಿ ರಥ ನಿರ್ಮಾಣ ಕಾಮಗಾರಿ ವೀಕ್ಷಿಸಿದ್ದರು. ನಂತರ ಹೊಸಪೇಟೆಗೆ ತೆರಳುವುದಾಗಿ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದರು.‌ ಆದರೆ, ಬಳಿಕ ಗೋವಾಕ್ಕೆ ತೆರಳಿದ್ದು, ಅಲ್ಲಿಂದಲೇ ದೆಹಲಿಯತ್ತ ಹಾರಿದ್ದಾರೆ.

is-anand-singh-went-to-delhi-again-to-meet-high-command
ಗೋವಾ ಮೂಲಕ ದೆಹಲಿಗೆ ತೆರಳಿದ ಆನಂದ್ ಸಿಂಗ್
author img

By

Published : Aug 18, 2021, 12:35 PM IST

Updated : Aug 18, 2021, 12:49 PM IST

ಹೊಸಪೇಟೆ/ಬೆಂಗಳೂರು: ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್ ಮನವೊಲಿಕೆ ಮಾಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಆನಂದ್ ಸಿಂಗ್ ಅಸಮಾಧಾನ ಶಮನಗೊಂಡಂತಿಲ್ಲ. ಪ್ರಭಾವಿ ಖಾತೆಗೆ ಲಾಬಿ ನಡೆಸಲು‌ ಅವರು ನವದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಸಂಧಾನದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಬದಲಿಸಿ ಆಗಸ್ಟ್ 15ರಂದು ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸಿದ್ದ ಸಚಿವ ಆನಂದ್ ಸಿಂಗ್ ಇನ್ನೂ ತಮ್ಮ ಪಟ್ಟು ಸಡಿಲಿಸಿಲ್ಲ. ವಿಧಾನಸೌಧಕ್ಕೆ ಆಗಮಿಸಿ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪೂರಕವಾಗಿ ಸಚಿವರಿಗೆ ಹಂಚಿಕೆಯಾಗಿದ್ದ ಕೊಠಡಿಗೆ ಖಾತೆಯ ನಾಮಫಲಕವನ್ನೂ ಹಾಕಲಾಗಿತ್ತು. ಆದರೆ ಆನಂದ್ ಸಿಂಗ್ ವಿಧಾನಸೌಧಕ್ಕೆ ಬರುವ ಬದಲು ದೆಹಲಿಗೆ ತೆರಳಿದ್ದಾರೆ.

ನಿನ್ನೆ ಹೊಸಪೇಟೆಯಿಂದ ಯಲ್ಲಾಪುರಕ್ಕೆ ಹೋಗಿದ್ದ ಆನಂದ್ ಸಿಂಗ್, ಅಲ್ಲಿ ರಥ ನಿರ್ಮಾಣ ಕಾಮಗಾರಿ ವೀಕ್ಷಿಸಿದ್ದರು. ಬಳಿಕ ಹೊಸಪೇಟೆ ತೆರಳುವುದಾಗಿ ಹೇಳಿದ್ದ ಅವರು, ಬೆಂಗಳೂರಿಗೂ ಬಾರದೆ ಗೋವಾಗೆ ತೆರಳಿದ್ದರು. ಅಲ್ಲಿಂದ ನವದೆಹಲಿಗೆ ಕಳೆದ ರಾತ್ರಿಯೇ ಪ್ರಯಾಣ ಬೆಳೆಸಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ, ಇಂಧನ, ಲೋಕೋಪಯೋಗಿಯಂತಹ ಟಾಪ್ ಖಾತೆಗಳಲ್ಲಿ ಒಂದನ್ನು ನೀಡುವಂತೆ ಸಿಎಂಗೆ ನಿರ್ದೇಶನ ನೀಡಿ ಎಂದು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ಸರ್ಕಾರ ರಚನೆಗೆ ಕಾರಣರಾದವರಲ್ಲಿ ನಾನು ಒಬ್ಬನಾಗಿದ್ದೇನೆ, ರಾಜೀನಾಮೆ ನೀಡಿದ್ದವರಲ್ಲಿ ನಾನೇ ಮೊದಲಿಗ ಎನ್ನುವುದನ್ನು ಗಮನಕ್ಕೆ ತಂದು ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಖಾತೆಗೆ ಅಸಮಾಧಾನ ಇತ್ತು. ಆದರೂ ಹೊಂದಿಕೊಂಡು ಹೋಗಿದ್ದೆ, ಈಗಲೂ ನನಗೆ ಸರಿಯಾದ ಖಾತೆ ನೀಡಿಲ್ಲ ಎಂದು ಅಳಲು ತೋಡಿಕೊಂಡು ಪ್ರಭಾವಿ ಖಾತೆಗೆ ಲಾಬಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ನಿವಾಸದಲ್ಲಿ ನಡೆದ ಮಾತುಕತೆ ನಂತರ ಸಚಿವ ಅಶೋಕ್ ಅವರ ಫ್ಲಾಟ್​​ನಲ್ಲಿ ಸಿಎಂ ಬೊಮ್ಮಾಯಿ ನಡೆಸಿದ್ದ ಸಂಧಾನ ಸಭೆ ಸಫಲವಾಗಿತ್ತು. ಆಗ ಸ್ವತಃ ಸಿಎಂ ಬೊಮ್ಮಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಆನಂದ್ ಸಿಂಗ್ ರಾಜೀನಾಮೆ ನೀಡಲ್ಲ, ಧ್ವಜಾರೋಹಣ ಬಳಿಕ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದಿದ್ದರು. ಈಗ ಅದರಂತೆ ಆನಂದ್ ಸಿಂಗ್ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಿರ್ದೇಶನದಂತೆ ಆನಂದ್ ಸಿಂಗ್ ಖಾತೆ ಬದಲಾವಣೆ ಕುರಿತು ನಿರ್ಧಾರವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಧಿಕಾರ ಸ್ವೀಕರಿಸದ ಸಚಿವ ಆನಂದ್ ಸಿಂಗ್: 'ನೀವುಂಟು, ಅವರುಂಟು' ಎಂದ ಸಿಎಂ

Last Updated : Aug 18, 2021, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.