ETV Bharat / state

ರಾಷ್ಟ್ರಧ್ವಜದ ಮೇಲೆ ಜೀಸಸ್ : ಬಳ್ಳಾರಿಯಲ್ಲಿ ಆರೋಪಿ ಬಂಧಿಸಿದ ಪೊಲೀಸರು - ಧ್ವಜ

ನಗರದ ಗಣೇಶ್ ಕಾಲೋನಿಯಲ್ಲಿ ರಘು ಎನ್ನುವವರ ಮನೆಯ ಮೇಲೆ ಧ್ವಜಾರೋಹಣ ಮಾಡಲಾಗಿದೆ. ಧ್ವಜದ ಮಧ್ಯೆ ಇರೋ ಆಶೋಕ ಚಕ್ರದ ಬಳಿ ಜೀಸಸ್ ಎಂದು ಬರೆಯಲಾಗಿದೆ.

ರಾಷ್ಟ್ರಧ್ವಜದ ಮೇಲೆ ಜೀಸಸ್
ರಾಷ್ಟ್ರಧ್ವಜದ ಮೇಲೆ ಜೀಸಸ್
author img

By

Published : Aug 14, 2022, 4:12 PM IST

ಬಳ್ಳಾರಿ: ನಗರದ ಗಣೇಶ ಕಾಲೋನಿಯಲ್ಲಿ ರಾಷ್ಟ್ರಧ್ವಜದ ಮೇಲೆ ಜೀಸಸ್ ಎನ್ನುವ ಸ್ಟಿಕರ್ ಅಂಟಿಸಿ ಮನೆಯ ಮೇಲೆ ಧ್ವಜಾರೋಹಣ ಮಾಡಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಸುಮೊಟೊ ಪ್ರಕರಣ ದಾಖಲಾಗಿದೆ.

ನಗರದ ಗಣೇಶ್ ಕಾಲೋನಿಯಲ್ಲಿ ರಘು ಎನ್ನುವವರ ಮನೆಯ ಮೇಲೆ ಧ್ವಜಾರೋಹಣ ಮಾಡಲಾಗಿದೆ. ಆದರೆ, ಧ್ವಜದ ಮಧ್ಯೆ ಇರೋ ಆಶೋಕ ಚಕ್ರದ ಬಳಿ ಜೀಸಸ್ ಎಂದು ಬರೆಯಲಾಗಿದೆ. ಇದು ವಿವಾದಕ್ಕೆ ಕಾರಣವಾಗಿತ್ತು.

ವಿಷಯ ತಿಳಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಧ್ವಜಾರೋಹಣ ಮಾಡಿದ ಮನೆಯ ಮುಂದೆ ಜಮಾವಣೆಗೊಂಡಿದ್ದರು. ತಕ್ಷಣ ಗಾಂಧಿನಗರ ಇನ್ಸ್​ಪೆಕ್ಟರ್ ಸಿದ್ದರಾಮೇಶ್ವರ ಗಡದ್ ಅವರು ಆರೋಪಿಯನ್ನು‌ ಕೂಡಲೇ ವಶಕ್ಕೆ ಪಡದಿದ್ದಾರೆ. ಹಾಗೆ ಧ್ವಜದ ಮೇಲಿದ್ದ ಜೀಸಸ್ ಎಂಬ ಹೆಸರನ್ನು ತೆಗೆಯಲಾಗಿದೆ.

ನಾವು ಆ ರೀತಿ ಮಾಡಿಲ್ಲ. ನಮ್ಮ ಮಗ ಬರೆದಿದ್ದಾನೆಂದು ಮನೆ ಮಾಲೀಕರು ಹೇಳಿದ್ದಾರೆ. ಆದರೆ, ಪರಿಸ್ಥಿತಿ ಕೈ ಮೀರುವ ಮೊದಲೇ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ನೆಹರು ಭಾವಚಿತ್ರ ಕೈಬಿಟ್ಟಿದ್ದೇವೆ : ಎನ್. ರವಿಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.