ಬಳ್ಳಾರಿ: ನಾಳೆ ಇಂಡಿಯಾ-ಪಾಕ್ ಮಧ್ಯೆ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯ ಎನ್ನಲಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾಗೆ ಶುಭಾಶಯ ಕೋರುತ್ತಿದ್ದಾರೆ.
ಭಾರತ ತಂಡದ ಮುಂಚೂಣಿ ಆಟಗಾರರಾದ ವಿರಾಟ್ಕೊಹ್ಲಿ, ರೋಹಿತ್ ಶರ್ಮಾ ಅವರು ಉತ್ತಮ ಆಟ ಪ್ರದರ್ಶನ ಮಾಡುತ್ತಿದ್ದಾರೆ. ಇಷ್ಟುದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ತಂಡ ಅತ್ಯುತ್ತಮ ಆಟ ಪ್ರದರ್ಶನ ಮಾಡಿದ್ದು, ನಾಳೆ ನಡೆಯುವ ಪಾಕಿಸ್ತಾನ- ಭಾರತ ನಡುವಿನ ಆಟದಲ್ಲೂ ಕೂಡ ಅತ್ಯುತ್ತಮ ಆಟ ಪ್ರದರ್ಶನ ಮಾಡುವ ಇಂಗಿತವನ್ನು ಬಳ್ಳಾರಿ ನಗರದ ಕ್ರಿಕೆಟ್ ಅಭಿಮಾನಿಗಳು ಆಶಯವನ್ನು ವ್ಯಕ್ತಪಡಿಸಿ ದ್ದಾರೆ.
ಇಡೀ ವಿಶ್ವಕಪ್ ಇತಿಹಾಸದಲ್ಲೇ ಭಾರತ ಯಾವತ್ತೂ ಪಾಕ್ ಎದುರು ಸೋತಿಲ್ಲ. ನಾಳೆ ನಡೆಯುವ ಪಂದ್ಯಾವಳಿಯಲ್ಲೂ ಕೂಡ ಭಾರತ ಸೋಲಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರವರ ಸಾರಥ್ಯ ದಲ್ಲಿ ಭಾರತ ತಂಡ ಅತ್ಯುತ್ತಮವಾಗಿ ಮುನ್ನಡೆಯಲಿದೆ. ಹೀಗಾಗಿ, ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಶುಭ ಹಾರೈಸಿದರು.ಇನ್ನು ಭಾರತ - ಪಾಕಿಸ್ತಾನದ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲು ಮಳೆ ಅಡ್ಡಿಯಾಗುವ ಸಾಧ್ಯತೆ ಎದುರಾಗಿದ್ದು, ಮಳೆರಾಯ ಮಾತ್ರ ಕರುಣೆ ತೋರಬೇಕು. ಪಂದ್ಯಾವಳಿ ಶುರುವಾಗಿ ಮುಕ್ತಾಯದವರೆಗೂ ವರುಣದೇವ ಅಡ್ಡಿಪಡಿಸಬಾರದೆಂದು ತಾವು ಬೇಡಿಕೊಳ್ಳುತ್ತಿರುವುದಾಗಿ ಬಳ್ಳಾರಿಯಲ್ಲಿನ ಕ್ರಿಕೆಟ್ ಅಭಿಮಾನಿಗಳು ತಿಳಿಸಿದ್ರು.