ಹೊಸಪೇಟೆ : ಸ್ಮಾರಕಗಳ ವೀಕ್ಷಣೆಗೆ ಭಾರತೀಯ ಪುರಾತತ್ವ ಇಲಾಖೆ ಅವಕಾಶ ಕಲ್ಪಿಸಿದೆ. ಜೂನ್ 16ರಿಂದ ಪ್ರವಾಸಿಗರು ಸ್ಮಾರಕಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆದರೆ, ಸ್ಥಳೀಯ ಆಡಳಿತಗಳ ಅನುಮತಿಯೊಂದಿಗೆ ಎಂದು ಆದೇಶ ಹೇಳಿದೆ. ಈ ಕುರಿತು ಭಾರತೀಯ ಪುರಾತತ್ವ ಇಲಾಖೆ ಹಂಪಿಯ ಉಪಅಧೀಕ್ಷಕ ಕಾಳಿಮುತ್ತು, ರಾಜ್ಯದಲ್ಲಿ ಇನ್ನೂ ಈ ತಿಂಗಳ 21ರವರೆಗೆ ಲಾಕ್ಡೌನ್ ಇರುವುದರಿಂದ ಹಂಪಿಸ್ಮಾರಕಗಳ ವೀಕ್ಷಣೆಗೆ ಅವಕಾಶ ಇಲ್ಲ. ಸ್ಥಳೀಯವಾಗಿ ಲಾಕ್ಡೌನ್ ತೆರವಾದರೆ ಸ್ಮಾರಕಗಳ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದರು.
ಕೋವಿಡ್ನಿಂದಾಗಿ ಕಳೆದ ಏಪ್ರಿಲ್ 15ರಿಂದ ಐತಿಹಾಸಿಕ ಹಂಪಿ ಸೇರಿದಂತೆ ಭಾರತೀಯ ಪುರಾತತ್ವ ಇಲಾಖೆಗಳ ಸ್ಮಾರಕಗಳು ಮತ್ತು ಮ್ಯೂಸಿಯಂಗಳ ವೀಕ್ಷಣೆಗೆ ಕೇಂದ್ರದ ಪುರಾತತ್ವ ಇಲಾಖೆ ಅವಕಾಶ ಕಲ್ಪಿಸಿರಲಿಲ್ಲ.