ETV Bharat / state

ಇನಾಂ ಭೂಮಿ ಕಬಳಿಕೆ ಆರೋಪ ಮಾಡಿದವರ ವಿರುದ್ಧ ಮಾನಹಾನಿ ಪ್ರಕರಣ: ಸಚಿವ ಆನಂದ್‌ ಸಿಂಗ್‌ - ಎಂಟು ಜನರ ಹೆಸರಿನಲ್ಲಿ ಬೇನಾಮಿ ಆಸ್ತಿ ಆರೋಪ

ಸಚಿವರ ಮಗ, ಬಾಮೈದ ಸೇರಿ 11 ಜನ ಇನಾಂ ಜಮೀನು ಕಬಳಿಸಿರುವ ಕುರಿತು ಕರವೇ ಪ್ರಜಾಸೇನೆ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಆರೋಪ -ಮಾನಹಾನಿ ಮೊಕದ್ದಮೆಗೆ ದಾಖಲಿಸಲು ಮುಂದಾದ ಸಚಿವ ಆನಂದ್‌ ಸಿಂಗ್‌

Minister Anand Singh spoke to reporters.
ಸಚಿವ ಆನಂದ್‌ ಸಿಂಗ್‌ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Mar 23, 2023, 9:11 PM IST

Updated : Mar 23, 2023, 11:01 PM IST

ಸಚಿವ ಆನಂದ್‌ ಸಿಂಗ್‌

ವಿಜಯನಗರ: ನಮ್ಮ ಕುಟುಂಬದ ವಿರುದ್ಧ ಇನಾಂ ಭೂಮಿ ಪರಭಾರೆ ಬಗ್ಗೆ ಆರೋಪ ಮಾಡಿದವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಿರುವೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ.

ತಾಲೂಕಿನ ವೆಂಕಟಾಪುರದಲ್ಲಿ ಗುರುವಾರ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಉದ್ಘಾಟಿಸಿದ ನಂತರ ಮಾಧ್ಯಮದವರ ಜತೆಗೆ ಮಾತನಾಡಿದರು. 11 ಜನ ಇನಾಂ ಜಮೀನು ಕಬಳಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್‌. ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಅದರಲ್ಲಿ ನನ್ನ ಹೆಸರಿಲ್ಲ. ನನ್ನ ಮಗ ಸಿದ್ದಾರ್ಥ ಸಿಂಗ್‌, ಭಾಮೈದ ಧರ್ಮೇಂದ್ರ ಸಿಂಗ್‌ ಹೆಸರಿದೆ. ಇತರೆ ಒಂಬತ್ತು ಜನ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ವಿವರಣೆ ನೀಡಿದರು.

ಹಿಂದೆ 50 ಲಕ್ಷಕ್ಕೆ ಬೇಡಿಕೆ, ಈಗ ಬ್ಲ್ಯಾಕ್‌ಮೇಲ್‌: ಕುಮಾರಸ್ವಾಮಿ ಸುಮಾರು ವರ್ಷಗಳ ಹಿಂದೆ ಬೇರೆಯವರ ಮೂಲಕ ನನ್ನ ಬಳಿ ಬಂದಿದ್ದರು. ಜಮೀನಿನ ಕುರಿತು ಹೇಳಿದಾಗ ನನ್ನ ಮಗ ಖರೀದಿಸಿದರೆ ಅದರಲ್ಲಿ ತಪ್ಪೇನಿದೆ ಎಂದಿದ್ದೆ. ನಿಮ್ಮ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅಷ್ಟೇ ಅಲ್ಲದೇ ಬೇರೆಯವರ ಮೂಲಕ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ನನ್ನ ಮಗ ಸ್ವತಃ ಎಲ್‌ಎಲ್‌ಬಿ ಪದವೀಧರ. ಅವನಿಗೆ ಕಾನೂನಿನ ಜ್ಞಾನವಿದೆ. ವಕೀಲರೊಂದಿಗೆ ಚರ್ಚಿಸಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ತಪ್ಪು ಮಾಡಿಲ್ಲ ಸಂಧಾನಕ್ಕೆ ಒಪ್ಪಲಿಲ್ಲ: ಕುಮಾರಸ್ವಾಮಿ ಬೆಂಗಳೂರಿಗೆ ಬಂದು ಮಾತನಾಡಿದ್ದರು. ಅವರು ಕೇಳಿದಷ್ಟು ಹಣ ಕೊಟ್ಟಿಲ್ಲ. ಅವರ ಆಡಿಯೋಗಳು ನನ್ನ ಹತ್ತಿರ ಕೂಡ ಇವೆ. ಈಗ ಚುನಾವಣೆ ಸಂದರ್ಭ ಇರುವುದರಿಂದ ನನ್ನ ಟಾರ್ಗೆಟ್ ಮಾಡಿರುವುದು ಎದ್ದು ಕಾಣುತ್ತದೆ ಎಂದು ಸಚಿವರು ಹೇಳಿದರು.

ಹಾಲಿ ನಗರಸಭೆಯ ಪಕ್ಷೇತರ ಸದಸ್ಯ ಅಬ್ದುಲ್‌ ಖದೀರ್‌ ಅವರ ಹೆಸರು ರೌಡಿಶೀಟರ್‌ ಪಟ್ಟಿಯಲ್ಲಿದೆ. ಅದೇ ರೀತಿ ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ್‌ ಕೂಡ ರೌಡಿಶೀಟರ್‌. ಇದೆಲ್ಲ ರೌಡಿಶೀಟರ್‌ಗಳ ಒಂದು ಗುಂಪು ಇದ್ದ ಹಾಗೆ ಕಾಣಿಸುತ್ತಿದೆ. ಇದೇ ಅಬ್ದುಲ್‌ ಖದೀರ್‌ ನಾನು ಸರ್ಕಾರಿ ಜಮೀನು ಅತಿಕ್ರಮಿಸಿ ಮನೆ ಕಟ್ಟಿದ್ದೇನೆ ಎಂದು ಆರೋಪಿಸಿ ಕೋರ್ಟ್‌ಗೆ ಪಿಐಎಲ್‌ ಹಾಕಿದ್ದಾರೆ. ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಇವರೇ ನನ್ನೊಂದಿಗೆ ಸಂಧಾನಕ್ಕೆ ಬಂದಿದ್ದರು. ನಾನು ತಪ್ಪು ಮಾಡಿಲ್ಲ. ಸಂಧಾನಕ್ಕೆ ಒಪ್ಪಲಿಲ್ಲ. ಈಗ ಇವರೆಲ್ಲ ಒಂದೆಡೆ ಸೇರಿದ್ದಾರೆ. ಇವರೆಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಎಂಟು ಜನರ ಹೆಸರಿನಲ್ಲಿ ಬೇನಾಮಿ ಆಸ್ತಿ ಆರೋಪ: ಸಂಡೂರಿನ ಎಮ್ಮಿಹಟ್ಟಿ ಗ್ರಾಮದಲ್ಲಿ ಕುಮಾರಸ್ವಾಮಿ ದೇವಾಲಯಕ್ಕೆ ಸೇರಿದ 180 ಎಕರೆ ಇನಾಮ ಜಮೀನು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಠಾಕೂರ್‌, ಬಾಮೈದ ಧರ್ಮೇಂದ್ರ ಸಿಂಗ್‌, ಅಬ್ದುಲ್‌ ರಹೀಮ್‌ ಮತ್ತು ಇತರೆ ಎಂಟು ಜನರ ಹೆಸರಿನಲ್ಲಿ ಸಚಿವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು ಎಂದು ಆನಂದ್ ಸಿಂಗ್ ತಿಳಿಸಿದರು.

ಹೊಸಪೇಟೆ ತಾಲೂಕಿನ ಹಂಪಿ ಸಮೀಪದ ನವವೃಂದಾವನದ ಬಳಿ ಹಾವೇರಿ ಜಿಲ್ಲೆಯ ರಾಕ್ ಗಾರ್ಡನ್ ಮಾದರಿಯಲ್ಲಿ ರೆಪ್ಲಿಕಾ ಆಫ್‌ ವಿಜಯನಗರ ಮಾಡುವ ಯೋಜನೆ ಇದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಅದಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇನೆ.

ಸರ್ಕಾರ ನನ್ನ ಮನವಿ ತಿರಸ್ಕರಿಸಿದೆ ಎಂಬ ಮಾಹಿತಿ ಇದೆ. ಕೇಂದ್ರ ಮತ್ತು ರಾಜ್ಯದ ಐದಾರು ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ. ಒಂದುವೇಳೆ ಸರ್ಕಾರ ಅನುಮತಿ ನೀಡದ್ರೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಆನಂದ್‌ ಸಿಂಗ್‌ ‘ರಿಕ್ರಿಯೇಷನ್‌ ಪಾರ್ಕ್‌’ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದು, ಅದು ನನ್ನ ವಿರುದ್ಧ ಮಾಡುತ್ತಿರುವ ಲಾಬಿಯಷ್ಟೇ ಎಂದು ಸಚಿವ ಆನಂದ್‌ ಸಿಂಗ್‌ ಪ್ರತಿಕ್ರಿಯೆ ನೀಡಿದರು.

ನವವೃಂದಾವನದ ಬಳಿ ಕ್ಲಬ್‌ ರೆಸಾರ್ಟ್‌ ಗೆ ವಿರೋಧ: ಹಿಂದೂ ಪವಿತ್ರ ಸ್ಥಳ ನವವೃಂದಾವನದ ಬಳಿ ಸಚಿವರಿಗೆ ಕ್ಲಬ್‌, ರೆಸಾರ್ಟ್‌ ತೆಗೆಯಲು ಸರ್ಕಾರ ಅವಕಾಶ ಕಲ್ಪಿಸಬಾರದು ಎಂದು ಕೊಪ್ಪಳ ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ ಆಗ್ರಹಿಸಿದ್ದಾರೆ.

ಹೊಸಪೇಟೆಯಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಸಚಿವ ಆನಂದ್‌ ಸಿಂಗ್‌ ಅವರು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳ ನವವೃಂದಾವನದ ಬಳಿ ಮನರಂಜನಾ ಪಾರ್ಕ್‌, ವಾಣಿಜ್ಯ ಉದ್ದೇಶದ ಹೆಸರಿನಲ್ಲಿ ಕ್ಲಬ್‌, ರೆಸಾರ್ಟ್‌ ಸ್ಥಾಪಿಸಲು ಮುಂದಾಗಿದ್ದಾರೆ. ಆನಂದ್ ಸಿಂಗ್ ವೆಂಕಟಾಪುರ ಗ್ರಾಮದ ಬಳಿ 51.64 ಎಕರೆ ಜಮೀನಿನಲ್ಲಿ ಮನರಂಜನಾ ಸೌಕರ್ಯಕ್ಕೆ ಅನುಮತಿ ಕೇಳಿದ್ದಾರೆ ಎಂದು ಆರೋಪಿಸಿದರು.

ಸಚಿವ ಆನಂದ್ ಸಿಂಗ್ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ನವಬೃಂದಾವನದ ಕೆಲವೇ ಮೀಟರ್ ಅಂತರದಲ್ಲಿ ಮನರಂಜನೆ ರಿಕ್ರೇಶಷನ್ ಕ್ಲಬ್ ಮಾಡುತ್ತಿದ್ದಾರೆ. ಪವಿತ್ರ ಸ್ಥಳದಲ್ಲಿ ಈ ರೀತಿಯ ಮನರಂಜನೆ ಕ್ಲಬ್​ಗೆ ವಿರೋಧ ವ್ಯಕ್ತಪಡಿಸಿದ ಅವರು, ಸರ್ಕಾರದ ಮೇಲೆ ಸಚಿವರು ಬಹಳಷ್ಟು ಒತ್ತಡ ಹಾಕುತ್ತಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಎಲ್ಲಾ ಧರ್ಮಿಯರೊಂದಿಗೆ ಹೊಸಪೇಟೆ ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂಓದಿ:ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳಿದಾಗ ನನಗೆ ಟಿಕೆಟ್ ಕೇಳಬಾರದಾ: ಆಯನೂರು ಮಂಜುನಾಥ್

Last Updated : Mar 23, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.