ETV Bharat / state

ಗಣಿನಾಡಲ್ಲಿ ಅಕ್ರಮ ಮದ್ಯದ ಹೊಳೆ: ಅಬಕಾರಿ ಇಲಾಖೆಯಿಂದ ಬರೆ

ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಸೇರಿದಂತೆ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಿಗೆ ಅಬಕಾರಿ ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ.

ಜಗದೀಶ ನಾಯ್ಕ
author img

By

Published : Apr 11, 2019, 7:56 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ‌ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಳೆದೊಂದು ತಿಂಗಳಿಂದ ಸರ್ಕಾರದ ಆದಾಯದ ಮೂಲಕ್ಕೆ ಕತ್ತರಿ ಬಿದ್ದಿದೆ.

ಅಬಕಾರಿ ಇಲಾಖೆ ಉಪಆಯುಕ್ತ ಜಗದೀಶ ನಾಯ್ಕ

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಚಟುವಟಿಕೆಗಳಿಗೆ ತಾತ್ಕಾಲಿಕ ಕಡಿವಾಣ ಹಾಕಿರುವ ಅಬಕಾರಿ ಅಧಿಕಾರಿಗಳು ಮದ್ಯ ಪೂರೈಕಾ ಕೇಂದ್ರಗಳತ್ತ ಹದ್ದಿನ‌ ಕಣ್ಣಿಟ್ಟಿದ್ದಾರೆ. ಒಂದು ತಿಂಗಳೊಳಗೆ ಸುಮಾರು 1.70 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮದ್ಯದ ದಾಸ್ತಾನು ಹಾಗೂ 489 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ಉಪಆಯುಕ್ತ ಜಗದೀಶ ನಾಯ್ಕ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಅಂದಾಜು 2,22,21,825 ಲೀಟರ್ ಐಎಂಎಲ್, 1109.720 ಬಿಯರ್ ಸೇರಿದಂತೆ ಒಟ್ಟಾರೆ 1,35,17, 759 ಮದ್ಯದ ಬಾಟಲ್ ಹಾಗೂ 26 ಲೀಟರ್ ಸೇಂದಿಯನ್ನ ಜಪ್ತಿಗೊಳಿಸಲಾಗಿದೆ ಎಂದು ನಾಯ್ಕ್‌ ಮಾಹಿತಿ ನೀಡಿದರು.

ವಾಹನಗಳ ಜಪ್ತಿ:

ಜಿಲ್ಲೆಯ ಆಯಾ ತಾಲೂಕಿನಾದ್ಯಂತ ಸುಮಾರು 51 ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನ ಹಾಗೂ ಭಾರಿ ಸರಕು ಸಾಗಣೆ ವಾಹನವನ್ನ ಜಪ್ತಿಗೊಳಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಎಲ್ಲೆಲ್ಲಿ ಆರೋಪಿಗಳ ಬಂಧನ?

ಜಿಲ್ಲೆಯ ಹಲವೆಡೆ ವಿವಿಧ ತಾಲೂಕುಗಳಲ್ಲಿ ಈವರೆಗೆ 489 ಆರೋಪಿಗಳನ್ನು ಬಂಧಿಸಲಾಗಿದೆ. ಡಿಸಿ ಸ್ಕ್ವಾಡ್ ತಂಡ - 44, ಬಳ್ಳಾರಿ ಎಸ್ ಡಿ ತಂಡ - 51, ಬಳ್ಳಾರಿ 01- 27, ಬಳ್ಳಾರಿ 02- 40, ಸಂಡೂರು - 34, ಸಿರುಗುಪ್ಪ -37, ಎಚ್ ಪಿಟಿ ಎಸ್ ಡಿ- 44, ಎಚ್ ಪಿಟಿ 01- 40, ಎಚ್ ಪಿಟಿ 02- 38, ಹಗರಿಬೊಮ್ಮನಹಳ್ಳಿ - 36, ಹಡಗಲಿ - 46, ಕೂಡ್ಲಿಗಿ- 52 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಅಬಕಾರಿ ದಾಳಿಗಳೆಷ್ಟು?

ಅಬಕಾರಿ ಇಲಾಖೆ ಪೊಲೀಸರು ಈವರೆಗೆ ಅಂದಾಜು 925 ಕಡೆಗಳಲ್ಲಿ ದಾಳಿ ನಡೆಸಿದ್ದು, ಸುಮಾರು 609 ಪ್ರಕರಣಗಳನ್ನ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿರುವ ಆರೋಪದಡಿ 432 ಜನರು ಹಾಗು 82 ಮಂದಿ ಸನ್ನದ್ದುದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಘೋರ ಅಪರಾಧ ಪ್ರಕರಣದಡಿಯಲ್ಲಿ 92 ಮಂದಿ ಮೇಲೆ ಕೇಸು ದಾಖಲು ಮಾಡಲಾಗಿದೆ.

Intro:ಮಾದರಿ ನೀತಿ ಸಂಹಿತೆ ಜಾರಿಗೊಂಡ ಹಿನ್ನಲೆ..
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ: ಅಂದಾಜು 489 ಮಂದಿಯನ್ನ ಬಂಧಿಸಿದ ಅಬಕಾರಿ ಪೊಲೀಸರು!
ಬಳ್ಳಾರಿ: ರಾಜ್ಯದ‌ ಅಬಕಾರಿ ಇಲಾಖೆಯ ಬಹುಪಾಲು ಆದಾಯ ಮೂಲದ ಕೇಂದ್ರವಾಗಿರುವ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ‌ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ರೋದರಿಂದ ಕಳೆದೊಂದು ತಿಂಗಳಿಂದ ಆದಾಯದ ಮೂಲಕ್ಕೆ ಕತ್ತರಿ ಬಿದ್ದಿದೆ.
ಲೋಕಸಭಾ ಚುನಾವಣಾ ನಿಮಿತ್ತ ಅಬಕಾರಿ ಇಲಾಖೆಯು ಕಟ್ಟೆಚ್ಚರವಹಿಸಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದ ಅಬಕಾರಿ ಪೊಲೀಸರು ಅನುಮಾಸ್ಪದವಾಗಿ ಪೂರೈಸುವ ಕೇಂದ್ರಗಳತ್ತ ಹದ್ದಿನ‌ ಕಣ್ಣು ಇರಿಸಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ತಿಂಗಳೊಳಗೆ ಸುಮಾರು 1.70 ಕೋಟಿ ರೂ. ಗಳಿಗೂ ಅಧಿಕ ಮೌಲ್ಯದ ಮದ್ಯದ ದಾಸ್ತಾನು ಹಾಗೂ 489 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಜಗದೀಶ ನಾಯ್ಕ ಈ ಟಿವಿ ಭಾರತ್
ಗೆ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಅಂದಾಜು 22221.825 ಲೀಟರ್ ಐಎಂಎಲ್, 1109.720 ಬಿಯರ್ ಸೇರಿದಂತೆ ಒಟ್ಟಾರೆಯಾಗಿ 1,35,17, 759 ಮದ್ಯದ ಬಾಟಲ್ ಹಾಗೂ 26 ಲೀಟರ್ ಸೇಂದಿಯನ್ನ ಜಪ್ತಿಗೊಳಿಸಲಾಗಿದೆ ಎಂದರು.

Body:ವಾಹನಗಳ ಜಪ್ತಿ: ಜಿಲ್ಲೆಯ ಆಯಾ ತಾಲೂಕಿನಾದ್ಯಂತ ಸರಿ ಸುಮಾರು 51 ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನ ಹಾಗೂ ಭಾರೀ ಸರಕು ಸಾಗಣೆ ವಾಹನವನ್ನ ಜಪ್ತಿಗೊಳಿಸ ಲಾಗಿದೆ ಎಂದರು.
ಎಲ್ಲೆಲ್ಲಿ ಆರೋಪಿಗಳ ಬಂಧನ: ಜಿಲ್ಲೆಯ ಆಯಾ ತಾಲೂಕಿನಲ್ಲಿ ಈವರೆಗೆ 489 ಆರೋಪಿಗಳನ್ನ ಬಂಧಿಸಲಾಗಿದೆ. ಡಿಸಿ ಸ್ಕ್ವಾಡ್ ತಂಡ - 44, ಬಳ್ಳಾರಿ ಎಸ್ ಡಿ ತಂಡ - 51, ಬಳ್ಳಾರಿ 01- 27, ಬಳ್ಳಾರಿ 02- 40, ಸಂಡೂರು - 34, ಸಿರುಗುಪ್ಪ -37, ಎಚ್ ಪಿಟಿ ಎಸ್ ಡಿ- 44, ಎಚ್ ಪಿಟಿ 01- 40, ಎಚ್ ಪಿಟಿ 02- 38, ಹಗರಿಬೊಮ್ಮನಹಳ್ಳಿ - 36, ಹಡಗಲಿ - 46, ಕೂಡ್ಲಿಗಿ- 52 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದರು.
ಅಬಕಾರಿ ದಾಳಿಗಳೆಷ್ಟು? : ಅಬಕಾರಿ ಇಲಾಖೆ ಪೊಲೀಸರು ಈವರೆಗೆ ಅಂದಾಜು 925 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ಸರಿಸುಮಾರು 609 ಪ್ರಕರಣಗಳನ್ನ ದಾಖಲಿಸಲಾಗಿದೆ.
ಸಾರ್ವಜನಿಕವಾಗಿ ಮದ್ಯಸೇವನೆ ಮಾಡಿರುವ ಆರೋಪದಡಿ 432, 82 ಮಂದಿ ಸನ್ನದ್ದುದಾರ ಮೇಲೆ ಪ್ರಕರಣ ದಾಖಲಿಸಿದ್ದು, ಘೋರ ಪ್ರಕರಣದಡಿ 92 ಮಂದಿ ಮೇಲೆ ಪ್ರಕರಣವನ್ನ ಮಾಡ ಲಾಗಿದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_02_110419_EXCISES_DEPT_STORY_VEERESH GK

R_KN_BEL_03_110419_EXCISES_DEPT_STORY_VEERESH GK

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.