ETV Bharat / state

ನಾನು ಸಲ್ಲಿಸಿದ ಸೇವೆ ಬಹಳ ಸಂತೋಷ ನೀಡಿದೆ: ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ - SS Nakul District Collector of Bellary District

ಇಂದು ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಪವನ್ ಕುಮಾರ್ ಮಲಪಾಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು .

I am satisfied with my work as DC in Bellary: S. S Nakul
ನಾನು ಸಲ್ಲಿಸಿದ ಸೇವೆ ಬಹಳ ಸಂತೋಷ ನೀಡಿದೆ: ಜಿಲ್ಲಾಧಿಕಾರಿ ಎಸ್. ಎಸ್. ನಕುಲ್
author img

By

Published : Jan 12, 2021, 12:21 AM IST

ಬಳ್ಳಾರಿ: ಕೊರೊನಾ ಸಮಯದಲ್ಲಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ವಿಮ್ಸ್, ಎನ್​ಜಿಒ, ಸಂಘ ಸಂಸ್ಥೆಗಳು ಹಾಗೂ ಮಾಧ್ಯಮದ ಮಿತ್ರರು ಉತ್ತಮ ಕೆಲಸ ಮಾಡಿ ನನಗೆ ಸಹಕಾರ ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಬಳ್ಳಾರಿ ಡಿಸಿ ಎಸ್. ಎಸ್. ನಕುಲ್ ಮಾತನಾಡಿ, ಕಳೆದ 19 ತಿಂಗಳಿಂದ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸವನ್ನು‌ ನಿರ್ವಹಿಸಿದ್ದೆನೆ. ಇಂದು ಪವನ್ ಕುಮಾರ್ ಮಲಪಾಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದೇನೆ.‌ ನಾನು ಸಹ ಇನ್ನು ಒಂದು ವಾರದೊಳಗೆ ದೆಹಲಿಗೆ ಹೋಗಿ ಅಧಿಕಾರ ಪಡೆಯಲಿರುವೆ ಎಂದು ತಿಳಿಸಿದರು.

ಬಳ್ಳಾರಿಯ ಜನರು ಮತ್ತು ಜನಪತ್ರಿನಿಧಿಗಳು ಜಿಲ್ಲೆಯ ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸೌಹಾರ್ದತೆಯಿಂದ ಸಹಕರಿಸಿದ್ದಾರೆ. ಕೊರೊನಾ ಸಮಯದಲ್ಲಿ ಬಳ್ಳಾರಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ವಿಮ್ಸ್, ಎನ್​ಜಿಒ, ಸಂಘ ಸಂಸ್ಥೆಗಳು ಸಹಕಾರ ನೀಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.

ಒಂದು ವರ್ಷದ ಏಳು ತಿಂಗಳುಗಳ ಕಾಲ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದು ಬಹಳ ಸಂತೋಷ ನೀಡಿದೆ ಎಂದು ಭಾವುಕರಾದರು.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.