ಬಳ್ಳಾರಿ: ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಪಾದಚಾರಿ ರಸ್ತೆಯ ಮೇಲೆ ನೆಲೆಸಿದ್ದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದಾನೆ.
ಹೈದರಾಬಾದ್ನ ಕರೀದಬಾದ್ ಏರಿಯಾದ ಅಶ್ವಿನ್ ಕುಮಾರ (41) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಊಟವಿಲ್ಲದೇ ಬಳಲುತ್ತಿದ್ದ ಈತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 15 ರಂದು ಸಾವನ್ನಪ್ಪಿದ್ದಾನೆಂದು ವಿಮ್ಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮೃತ ವ್ಯಕ್ತಿಯ ಚಹರೆ ಗುರುತು: 5.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಬಿಳಿ ಕಪ್ಪು ಮಿಶ್ರಿತ ಕೂದಲು, ಕೆಂಪು ಬಣ್ಣದ ಟೀ- ಶರ್ಟ್, ಬಿಳಿ ಗೀಟುಗಳುಳ್ಳ ಲುಂಗಿ ಧರಿಸಿದ್ದಾನೆ.
ಮೃತನ ಸಂಬಂಧಿಕರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಬ್ರೂಸ್ ಪೇಟೆ ಪೊಲೀಸ್ ಠಾಣೆ ದೂ.ಸಂ. 08392- 272022, ಪಿ.ಐ.ಬ್ರೂಸ್‍ಪೇಟೆ ದೂ.ಸಂ. 94808-03045, ಡಿಎಸ್ಪಿ 94808- 03020ಗೆ ಸಂಪರ್ಕಿಸಲು ಕೋರಿದೆ.
ಈ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.