ETV Bharat / state

ಪತ್ನಿಯ ಶೀಲ ಶಂಕಿಸಿ ರುಂಡ ಚೆಂಡಾಡಿದ ಪತಿರಾಯ ಈಗ ಪೊಲೀಸರ ಅತಿಥಿ - ಪತ್ನಿಯ ಶೀಲ ಶಂಕಿಸಿ ಕೊಲೆ

ಟಿ.ಬಿ.ಡ್ಯಾಂನ ಪ್ರದೇಶದಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪತ್ನಿ ಲಲಿತಾಳ ಶೀಲ ಶಂಕಿಸಿದ ಪತಿರಾಯ, ಕೊಡಲಿಯಿಂದ ಆಕೆಯ ಕುತ್ತಿಗೆಗೆ ಬಲವಾಗಿ ಹೊಡೆದು ಕೊಲೆಗೈದಿದ್ದಾನೆ.

crime
ಕೊಲೆ
author img

By

Published : May 8, 2020, 7:54 PM IST

ಬಳ್ಳಾರಿ: ಪತ್ನಿಯ ಶೀಲ ಶಂಕಿಸಿ ರುಂಡವನ್ನೇ ಚೆಂಡಾಡಿದ ಪತಿರಾಯ ಈಗ ಹೊಸಪೇಟೆ ನಗರದ ಗ್ರಾಮೀಣ ಠಾಣೆಯ ಪೊಲೀಸರ ಅತಿಥಿಯಾಗಿದ್ದಾನೆ.

ಹೊಸಪೇಟೆ ನಗರದ ನಿವಾಸಿ ಅಣ್ಣಪ್ಪ ಬಂಧಿತ ಆರೋಪಿ. ನಗರ ಹೊರವಲಯದ ಟಿ.ಬಿ.ಡ್ಯಾಂನ ಪ್ರದೇಶದಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪತ್ನಿ ಲಲಿತಾಳ ಶೀಲ ಶಂಕಿಸಿದ ಪತಿರಾಯ, ಕೊಡಲಿಯಿಂದ ಆಕೆಯ ಕುತ್ತಿಗೆಗೆ ಬಲವಾಗಿ ಹೊಡೆದು ಕೊಲೆಗೈದಿದ್ದಾನೆ. ಲಲಿತಾಳ ರುಂಡ ಮತ್ತು ದೇಹ ಬೇರ್ಪಟ್ಟಿದ್ದು, ಬರ್ಬರವಾಗಿ ಕೊಲೆಗೈಯಲಾಗಿದೆ.‌

ಹಿನ್ನಲೆ:

ಅಣ್ಣಪ್ಪ 2006 ರಂದು ಲಲಿತಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಬಳಿಕ, 2019 ರಂದು ಅಣ್ಣಪ್ಪ ಲಲಿತಾ ಶೀಲದ ಮೇಲೆ ಅನುಮಾನ ಪಟ್ಟು ಮನೆಯಿಂದ ಹೊರಗೆ ಹಾಕಿದ್ದ. ಆಗಾಗ ಮನೆಗೆ ಮಕ್ಕಳನ್ನು ಮಾತನಾಡಿಸಲು ಲಿಲಿತಾ ಬರುತ್ತಿದ್ದರಿಂದ, ಪತಿರಾಯ ಅಣ್ಣಪ್ಪ ಪದೇ ಪದೆ ಮನೆಗೆ ಬರಬೇಡ ಎಂದು ತಾಕೀತು ಮಾಡಿದ್ದಾನೆ. ಇದೇ ಮೇ.6ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಣ್ಣಪ್ಪ ಮತ್ತು‌ ಲಲಿತಾಳಿಗೆ ಹಿರಿಯರು, ಪೊಲೀಸ್ ಅಧಿಕಾರಿಗಳ‌ ಸಮಕ್ಷಮದಲ್ಲಿ‌ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೆ ಇಂದು ಲಲಿತಾ ಹೆಣವಾಗಿ ಹೋಗಿದ್ದಾಳೆ.

fir
ದೂರಿನ ಪ್ರತಿ

ಶುಕ್ರವಾರ ಬೆಳಿಗ್ಗೆ ಲಲಿತಾಳ ತಂದೆ ಮಲ್ಲಿಕಾರ್ಜುನ ಅವರು ಅಣ್ಣಪ್ಪ ವಿರುದ್ಧ ಹೊಸಪೇಟೆ ನಗರದ ಗ್ರಾಮೀಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಬಳಿಕ, ಪೊಲೀಸರು ಆರೋಪಿ ಅಣ್ಣಪ್ಪನನ್ನು ನಗರದ 13ನೇಯ ವಾರ್ಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.