ETV Bharat / state

ಗಡ್ಕರಿ, ಅಮಿತ್ ಶಾ ಪುತ್ರರ ಅಕ್ರಮ ಸಂಪತ್ತು ಎಷ್ಟಿದೆ? ಮಾಜಿ ಸಂಸದ ಉಗ್ರಪ್ಪ ಪ್ರಶ್ನೆ - Black money

ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ವಿ.ಎಸ್.ಉಗ್ರಪ್ಪ
author img

By

Published : Sep 14, 2019, 7:35 PM IST

ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರ ಪುತ್ರರ ಹೆಸರಿನಡಿ ಎಷ್ಟೆಷ್ಟು ಅಕ್ರಮ ಸಂಪತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಪ್ರಶ್ನಿಸಿದ್ದಾರೆ.

ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

ಬಳ್ಳಾರಿಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಅಮಿತ್ ಶಾ ಹಾಗೂ ನಿತಿನ್ ಗಡ್ಕರಿ ಪುತ್ರರು ಗಳಿಸಿದ ಅಕ್ರಮ ಸಂಪತ್ತಿನ ಮಾಹಿತಿಯನ್ನು ಅಧಿಕಾರಿವರ್ಗ ಪತ್ತೆಹಚ್ಚಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಕೇವಲ ಕರ್ನಾಟಕ ಕಾಂಗ್ರೆಸ್​ನ ಶಾಸಕ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಸಂಪತ್ತಿನ ಮಾಹಿತಿಯನ್ನು ಕಲೆಹಾಕಲು ಮುಂದಾಗಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಶಿವಕುಮಾರ್ ಅವರನ್ನು ವಿಚಾರಣೆ ನೆಪವೊಡ್ಡಿ ಇಡಿ ವಶಕ್ಕೆ ವಹಿಸಿಕೊಳ್ಳುವ ವಾದವನ್ನು ವಕೀಲರಿಂದ ಮಂಡಿಸುತ್ತಿದ್ದಾರೆ. ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಪ್ರಧಾನಿ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಷಾ ಅವರ ಅಣತಿಯಂತೆ ನಡೆಯುತ್ತಿವೆ. ಹೀಗಾಗಿ, ಈ ಇಲಾಖೆಗಳ ಮೇಲೆ ಶ್ರೀಸಾಮಾನ್ಯರಲ್ಲಿ ಕಿಂಚಿತ್ತೂ ನಂಬಿಕೆ ಇಲ್ಲದಂತಾಗಿದೆ ಎಂದು ದೂರಿದ್ದಾರೆ.

ಅಲ್ಲದೆ ಈ ಎಲ್ಲದಕ್ಕೂ ಗುಜರಾತ್​ನ ರಾಜ್ಯಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಎಂಟ್ರಿಯೇ ಕಾರಣವಾಗಿದೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ದ್ವೇಷ ಸಾಧನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಜಿಲ್ಲೆಯ ಸಂಡೂರು, ತೋರಣಗಲ್ಲು ವ್ಯಾಪ್ತಿಯ ವಡ್ಡು ಗ್ರಾಮದ ಆರು ವರ್ಷದ ಬಾಲಕಿಯ ನಿಗೂಢ ಸಾವಿನ ಪ್ರಕರಣ ವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಸೆ.8 ರಂದು ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗುತ್ತಾಳೆ ಅಂದರೆ ಇದು ಹೇಯಕರವಾದ ಕೃತ್ಯವಾಗಿದ್ದು, ಮಾನವೀಯ ಮೌಲ್ಯಗಳನ್ನು ಮರೆಮಾಚುವಂತದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೃತ ಬಾಲಕಿಯ ಅಂತ್ಯ ಸಂಸ್ಕಾರಕ್ಕರ 20,000 ರೂ. ಹಣ ಬಿಡುಗಡೆ ಮಾಡಬೇಕೆಂಬ ನಿಯಮವಿದ್ದರೂ ಈವರೆಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೆ ಬಿಡುಗಡೆಗೆ ಮುಂದಾಗಿಲ್ಲ. ಆ ಕುರಿತು ಮಾಹಿತಿಯೇ ಇಲ್ಲವೆಂದು ಹೇಳುತ್ತಿರೋದು ಅಶ್ಚರ್ಯಕರ ಸಂಗತಿ ಎಂದಿದ್ದಾರೆ. ರಾಜ್ಯ ಸರ್ಕಾರ 3 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದ 8.25 ಲಕ್ಷ ರೂ.ಗಳ ಪರಿಹಾರವನ್ನು ಬಾಲಕಿಯ ಕುಟುಂಬಸ್ಥರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನೆರೆಹೊರೆಯ ರಾಜ್ಯದ ನೂರಾರು ಕಾರ್ಮಿಕರು ಇಲ್ಲಿ ಬಂದು ನೆಲೆಸಿ, ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲೆ ನಿಗಾ ಇರಿಸಬೇಕು ಎಂದಿದ್ದಾರೆ.

Intro:ವಡ್ಡು ಗ್ರಾಮದ ಬಾಲಕಿ ನಿಗೂಢ ಸಾವು
ನೆರೆಹೊರೆಯ ರಾಜ್ಯದ ಕಾರ್ಮಿಕರ ಮೇಲೆ ನಿಗಾವಹಿಸಲು
ಮಾಜಿ ಸಂಸದ ಉಗ್ರಪ್ಪ ಆಗ್ರಹ
ಬಳ್ಳಾರಿ: ಜಿಲ್ಲೆಯ ಸಂಡೂರು ತೋರಣಗಲ್ಲು ವ್ಯಾಪ್ತಿಯ ವಡ್ಡು ಗ್ರಾಮದ ಆರುವರ್ಷದ ಬಾಲಕಿಯ ನಿಗೂಢ ಸಾವಿನ ಪ್ರಕರಣ ವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಹಾಗೂ ನೆರೆಹೊರೆಯ ರಾಜ್ಯಗಳಿಂದ ವಲಸೆ ಬಂದು ಅಲ್ಲಿ ನೆಲೆಸಿರುವ ಜಿಂದಾಲ್ ಕಾರ್ಖಾನೆಯ ಕಾರ್ಮಿಕರ ಮೇಲೆ ನಿಗಾವಹಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಬಳ್ಳಾರಿಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿಂದು
ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಇದೊಂದು ಅಮಾನವೀಯ ಕೃತ್ಯ. ಸೆ.8 ರಂದು ಕಾಣೆಯಾಗಿದ್ದ ಆ ಬಾಲಕಿ ಶವವಾಗಿ ಗೋಣಿ ಚೀಲದಲ್ಲಿ ಪತ್ತೆಯಾಗುತ್ತಾಳೆ ಅಂದರೆ. ಇದು ಹೇಯಕರವಾದ ಕೃತ್ಯವಾಗಿದ್ದು, ಮಾನವೀಯ ಮೌಲ್ಯಗಳನ್ನು ಮರೆಮಾಚುವಂತಹದ್ದಾಗಿದೆ. ಈ ಕೃತ್ಯ ಎಸಗಿದವರು ಯಾರೆಂದು ಪತ್ತೆಹಚ್ಚಿ, ಅವರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಈವರೆಗೂ ವಿಫಲವಾಗಿದೆ. ಅಲ್ಲದೇ, ಆ ಬಾಲಕಿಯ ಅಂತ್ಯ ಸಂಸ್ಕಾರಕ್ಭಾಗಿಯಾಗಿದಡಳಿತವು ಕಿಂಚಿತ್ತೂ ಹಣ ಬಿಡುಗಡೆ ಮಾಡಿಲ್ಲ. ಮೃತ ಬಾಲಕಿಯ ಅಂತ್ಯ ಸಂಸ್ಕಾರಕ್ಕೆಂದು 20,000 ರೂ.ಗಳ ಹಣ ಬಿಡುಗಡೆ ಮಾಡಬೇಕೆಂಬ ನಿಯಮವಿದ್ದರೂ ಈವರೆಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮುಂದಾಗಿಲ್ಲ. ಆ ಕುರಿತು ಮಾಹಿತಿಯೇ ಇಲ್ಲವೆಂದು ಹೇಳುತ್ತಿರೋದು ಅಶ್ಚರ್ಯಕರ ಸಂಗತಿ ಎಂದಿದ್ದಾರೆ.
ನೆರೆಹೊರೆಯ ರಾಜ್ಯದ ನೂರಾರು ಕಾರ್ಮಿಕರು ಇಲ್ಲಿ ಬಂದು ನೆಲೆಸಿ, ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲೆ ನಿಗಾ ಇರಿಸಬೇಕು. ಹಾಗೂ ಯಾವುದಾದ್ರೂ ಇಂತಹ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದು ಸಾಬೀತು ಆದಲ್ಲಿ, ಆ ಕಾರ್ಖಾನೆಯ ಮಾಲೀಕರನ್ನೂ ಕೂಡ ನೇರ ಹೊಣೆ ಗಾರಿಕೆಯನ್ನಾಗಿಸಬೇಕೆಂಬುದು ಕಾಯಿದೆಯಲ್ಲಿದೆ. ಈ ಕುರಿತು ಜಿಲ್ಲಾಧಿಕಾರಿ ನಕುಲ್ ಅವರ ಗಮನ ಸೆಳೆದಿರುವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ
3 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದ 8.25 ಲಕ್ಷ ರೂ.ಗಳ ಪರಿಹಾರವನ್ನು ಸಂತ್ರಸ್ಥೆ ಬಾಲಕಿಯ ಕುಟುಂಬಸ್ಥರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Body:ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಹಳಿ ತಪ್ಪಿದೆ. ಒಂದೆಡೆ ಪ್ರವಾಹ, ಮತ್ತೊಂದಡೆ ಬರ ಆವರಿಸಿದೆ. ಪ್ರವಾಹದಿಂದ ಲಕ್ಷಾಂತರ ಕೋಟಿ ರೂ.ಗಳ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಈವರೆಗೆ ಕೇವಲ 374 ಕೋಟಿ ರೂ. ಬಿಡುಗಡೆ ಮಾಡಿದೆ. 7.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2 ಲಕ್ಷಕ್ಕೂ ಅಧಿಕ ಮನೆಗಳು ಬಿದ್ದಿವೆ. ಒಟ್ಟಾರೆಯಾಗಿ 38,000ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಆದರೆ 3800 ಕೋಟಿ ರೂ. ಮಾತ್ರ ಕೇಂದ್ರಕ್ಕೆ ಪರಿಹಾರ ಕೇಳಿರುವುದು ತಿಳಿಯದಂತಾಗಿದೆ. ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ್ದರೂ ಪ್ರವಾಹ ಪೀಡಿತ ಬಗ್ಗೆ ಕಾಳಜಿವಹಿಸಲಿಲ್ಲ. ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಪಿಕ್ ನಿಕ್ ಥರ ಬಂದು ಹೋಗಿದ್ದಾರೆ. ಜನರ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಬದ್ಧತೆ ಬಿಜೆಪಿಗೆ ಇಲ್ಲದಂತಾಗಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ, ಮಂತ್ರಿ ಸ್ಥಾನಗಳು ವ್ಯಾಪಾರಕ್ಕಿವೆ ಎಂದು ಆರೋಪಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_3_EX_MP_UGRAPPA_PRESS_MEET_BYTE_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.