ಹೊಸಪೇಟೆ: ತಾಲೂಕಿನಲ್ಲಿ ಸತತ ಎರಡು ದಿನಗಳಿಂದ ಮಳೆಯಾಗುತ್ತಿದೆ. ಮಣ್ಣಿನ ಮನೆಗಳು ಭಾಗಶಃ ಕುಸಿಯುತ್ತಿವೆ. ಇದರಿಂದ ನಿವಾಸಿಗಳು ತೊಂದರೆ ಪಡುವಂತಾಗಿದೆ.
ಮರಿಯಮ್ಮನಹಳ್ಳಿಯ 6ನೇ ವಾರ್ಡ್‌ನಲ್ಲಿರುವ ಗಂಗಮ್ಮ ಭೋವಿ ಎಂಬುವರ ಮನೆ ಕುಸಿದಿದೆ. ಕೆಲ ದಿನಗಳ ಹಿಂದೆ ಮಳೆಯಿಂದಾಗಿ ಮರಿಯಮ್ಮನಹಳ್ಳಿ ಭಾಗದಲ್ಲಿ ಐದು ಮನೆ ಭಾಗಶಃ ಕುಸಿತ ಕಂಡಿದ್ದವು.
ತಾಲೂಕಿನಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದೆ. ನಿನ್ನೆ 37 ಎಂಎಂ ಹಾಗೂ ಇಂದು 7.2 ಎಂಎಂ ಮಳೆಯಾಗಿದೆ.