ETV Bharat / state

ಹೊಸಪೇಟೆ: ನಿರ್ಮಾಣವಾದ ಆರೇ ವರ್ಷಗಳಲ್ಲಿ ಸೋರುತ್ತಿರುವ ಸುರಂಗ ಮಾರ್ಗ - Latest News Update

ಹೊಸಪೇಟೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ - 50 ರಲ್ಲಿನ ಸುರಂಗ ಮಾರ್ಗದ ಬಹುತೇಕ ಭಾಗವು ಮಳೆ ಬಂದರೆ ಸಾಕು ಸೋರಲು ಪ್ರಾರಂಭಿಸುತ್ತದೆ. ಟನಲ್​ ನಿರ್ಮಾಣವಾಗಿ ಕೇವಲ ಆರು ವರ್ಷಗಳು ಮಾತ್ರವೇ ಆಗಿದ್ದು, ಇದರ ಸೋರುವಿಕೆ ಟನಲ್ ನ ಗುಣಮಟ್ಟದ ಬಗ್ಗೆ ಸಂಶಯ ಹುಟ್ಟಿಸಿದೆ.

Hospet: tunnel is leaking just 6 years after construction
ಹೊಸಪೇಟೆ: ನಿರ್ಮಾಣವಾದ ಆರೇ ವರ್ಷಗಳಲ್ಲಿ ಸೋರುತ್ತಿರುವ ಸುರಂಗ ಮಾರ್ಗ....
author img

By

Published : Oct 15, 2020, 8:26 PM IST

ಹೊಸಪೇಟೆ: ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿನ ಸುರಂಗ ಮಾರ್ಗದ ಬಹುತೇಕ ಭಾಗವು ಮಳೆ ಬಂದರೇ ಸಾಕು ಸೋರಲು ಪ್ರಾರಂಭಿಸುತ್ತದೆ. ಟನಲ್​ ನಿರ್ಮಾಣವಾಗಿ ಕೇವಲ ಆರು ವರ್ಷಗಳು ಮಾತ್ರವೇ ಆಗಿದ್ದು, ಇದರ ಸೋರುವಿಕೆ ಟನಲ್ ನ ಗುಣಮಟ್ಟತೆಯ ಬಗ್ಗೆ ಸಂಶಯ ಹುಟ್ಟಿಸಿದೆ.

ಹೊಸಪೇಟೆ: ನಿರ್ಮಾಣವಾದ ಆರೇ ವರ್ಷಗಳಲ್ಲಿ ಸೋರುತ್ತಿರುವ ಸುರಂಗ ಮಾರ್ಗ....

2014 ರಲ್ಲಿ ದೆಹಲಿ ಮೂಲದ ಒಎಸ್ಇ(ಒರೆಯಂಟಲ್ ಸ್ಟೇಚರ್ ಇಂಜಿನಿಯರ್ಸ್) ಸಂಸ್ಥೆಯು ಈ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಿದೆ. ನಿರ್ಮಾಣ ಹಾಗೂ ನಿರ್ವಹಣೆ ವೆಚ್ಚವನ್ನು ಭರಿಸಲು ಕೇಂದ್ರ ಸರ್ಕಾರವು ಸಂಸ್ಥೆಗೆ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಬಳಿ ಟೋಲ್ ಸಂಗ್ರಹಿಸಲು ಅನುಮತಿಯನ್ನು ನೀಡಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯು ಟನಲ್ ನಿರ್ವಹಣೆ ಹಾಗೂ ಟೋಲ್ ಸಂಗ್ರಹಣೆಯನ್ನು 15 ವರ್ಷಗಳ ಕಾಲ ಮಾಡಬೇಕಾಗಿದೆ.‌

ಟನಲ್ ನಿರ್ಮಿಸುವ ಮುನ್ನ ವಾಹನಗಳು ಗುಡ್ಡವನ್ನು ಏರಿ ಸಂಚರಿಸಬೇಕಾಗಿತ್ತು. ಆಗ ಟ್ರಾಫಿಕ್ ಸಮಸ್ಯೆ ಉಂಟಾಗಿ ವಾಹನಗಳು ಗಂಟೆಗಟ್ಟಲೇ ಕಾಯುವಂತ ಪರಿಸ್ಥಿತಿ ಇತ್ತು. ‌ಇದನ್ನು ಹೋಗಲಾಡಿಸಲು ಗುಡ್ಡದಲ್ಲಿ ಟನಲ್ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಾಯಿತು.

ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರಿಯೋಜನಾ ನಿರ್ದೇಶಕ ಅಜಯ್ ಮಣಿ ಕುಮಾರ ಅವರು ಮಾತನಾಡಿ, ಟನಲ್ ಸೋರುತ್ತಿರುವ ಕುರಿತು ಈಗಾಗಲೇ ನಿರ್ಮಾಣ ಹಾಗೂ ನಿರ್ವಹಣೆ ಹೊತ್ತ ಒಎಸ್ಇ ಸಂಸ್ಥೆಯ ಗಮನಕ್ಕೆ ತರಲಾಗಿದೆ.‌ ಸಂಸ್ಥೆಯು ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಿಳಿಸಿದೆ.‌ ಟನಲ್ ಸೋರಿಕೆಯಾಗುವುದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ. ವಾಹನ ಸವಾರರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಇನ್ನು ಈ ಸಂಬಂಧ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಒಎಸ್ಇ ಗುತ್ತಿಗೆದಾರರ ಮಧುಸೂದನ್ ಅವರು ಮಾತನಾಡಿ, ಟನಲ್ ಅನ್ನು 65 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಂಸ್ಥೆಯು 15 ವರ್ಷ ಟನಲ್ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ.‌ ಆದರೆ, ರೈಲ್ವೇ ಟ್ರ್ಯಾಕ್ ನಿಂದಾಗಿ ಟನಲ್ ಸೋರಲು ಪ್ರಾರಂಭಿಸಿದ್ದು, ಈಗಾಗಲೇ ಈ ಕುರಿತು ರೈಲ್ವೇ ವಿಭಾಗಕ್ಕೆ ತಿಳಿಸಲಾಗಿದೆ. ಅವರೂ ಕೂಡ ಕೂಡಲೇ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.