ಹೊಸಪೇಟೆ (ಬಳ್ಳಾರಿ): ಹೊಸಪೇಟೆಯಲ್ಲಿ ದಸರಾ ಹಬ್ಬದ ಅಂಗವಾಗಿ ನೆರವೇರಿದ ಪಲ್ಲಕ್ಕಿ ಉತ್ಸವದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಭಾಗಿಯಾದರು.
ವಿಧಾನಸಭಾ ಚುನಾವಣೆಯಲ್ಲಿ ಆನಂದ ಸಿಂಗ್ ಅವರು ಸತತವಾಗಿ ನಾಲ್ಕನೇ ಬಾರಿ ವಿಜಯಶಾಲಿಯಾಗಿದ್ದರಿಂದ ವಾಲ್ಮೀಕಿ ಸಮಾಜದ 5 ಕೇರಿಗಳಿಗೆ ತಲಾ 9 ಕೆಜಿ ಬೆಳ್ಳಿ ದೇಣಿಗೆ ನೀಡಿದ್ದರು. ಈಗ ಆ ಬೆಳ್ಳಿ ಬಳಸಿ ಪಲ್ಲಕ್ಕಿಯನ್ನು ಸಿದ್ಧಗೊಳಿಸಲಾಗಿದ್ದು, ಸ್ವತಃ ಸಚಿವರೇ ಅದನ್ನು ಹೆಗಲ ಮೇಲೆ ಹೊತ್ತು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಸಚಿವರು ಮೊದಲಿಗೆ ನಗರದ ಉಕ್ಕಡಕೇರಿಯ ಹುಲಿಗೇಮ್ಮ ದೇವಿ, ಜಲದುರ್ಗಾ ದೇವಿ ಹಾಗೂ ತಳವಾರ ಕೇರಿಯ ರಾಂಪುರದುರ್ಗಮ್ಮ ದೇವಿಯ ಪಲ್ಲಕ್ಕಿಯ ಪ್ರದಕ್ಷಿಣೆ ಹಾಕಿದರು.