ETV Bharat / state

ಹೊಸಪೇಟೆ: ಹಂಪಿ ನದಿಪಾತ್ರದ ಸ್ಮಾರಕಗಳು ಮುಳುಗಡೆ - Hampi River Monument sinking news 2021

ಚಕ್ರತೀರ್ಥ ಕೋದಂಡರಾಮ ಸ್ವಾಮಿ ದೇಗುಲದ ಮುಂಭಾಗದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಹೀಗಾಗಿ ಬೆಳಗ್ಗೆಯಿಂದ ಬೋಟ್ ಸಂಚಾರವನ್ನು ನಿಷೇಧಿಸಲಾಗಿತ್ತು. ಅಲ್ಲದೇ, ನದಿದಡದಲ್ಲಿ ಹೋಗದಂತೆ ಪೊಲೀಸ್ ಸಿಬ್ಬಂದಿ ಜನರನ್ನು ಎಚ್ಚರಿಸಿದ್ದಾರೆ.

hospet-hampi-river-monument-sinking-by-water
ಹಂಪಿ ನದಿಪಾತ್ರದ ಸ್ಮಾರಕಗಳು ಮುಳುಗಡೆ
author img

By

Published : Jul 25, 2021, 9:46 PM IST

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಹಂಪಿ ನದಿ ಪಾತ್ರದ ಸ್ಮಾರಕಗಳು ಜಲಾವೃತಗೊಂಡಿವೆ.

ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು‌ ನದಿಗೆ ಹರಿಸಿದ‌ ಪರಿಣಾಮ, ವಿಶ್ವವಿಖ್ಯಾತ ಹಂಪಿಯ ತುಂಗಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಹಂಪಿ ನದಿಪಾತ್ರದ ಸ್ಮಾರಕಗಳು ಮುಳುಗಡೆ
ಜಲಾಶಯದಿಂದ ಸಂಜೆ 46 ಸಾವಿರ ಕ್ಯೂಸೆಕ್ ನೀರನ್ನು ಆಸು ಪಾಸಿನಲ್ಲಿ ನದಿಗೆ ಹರಿಸಲಾಗಿತ್ತು. ಹಾಗಾಗಿ ನದಿಯ ಪಾತ್ರದಲ್ಲಿರುವ ವೈದಿಕ ಮಂಟಪ, ಸ್ನಾನಘಟ್ಟ, ಕೋಟಿಲಿಂಗ, ಪುರಂದರದಾಸರ ‌ಮಂಟಪ‌‌ ಮುಳುಗಡೆಯಾಗಿವೆ.

ಚಕ್ರತೀರ್ಥ ಕೋದಂಡರಾಮ ಸ್ವಾಮಿ ದೇಗುಲದ ಮುಂಭಾಗದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಹೀಗಾಗಿ ಬೆಳಗ್ಗೆಯಿಂದ ಬೋಟ್ ಸಂಚಾರವನ್ನು ನಿಷೇಧಿಸಲಾಗಿತ್ತು. ಅಲ್ಲದೇ, ನದಿದಡದಲ್ಲಿ ಹೋಗದಂತೆ ಪೊಲೀಸ್ ಸಿಬ್ಬಂದಿ ಜನರನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮಾರ್ಷಲ್‌ ಆರ್ಟ್ಸ್‌ನಲ್ಲಿ ಬೆರಗು ಮೂಡಿಸುವಂತಿದೆ ರಿಷಬ್ ಶೆಟ್ಟಿ ಸಾಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.