ಹೊಸಪೇಟೆ : ಬಸವಣ್ಣನವರ ವಚನಗಿಂತ100 ವರ್ಷಗಳ ಮುಂಚಿತವಾಗಿ ದೇವರ ದಾಸಿಮಯ್ಯ ಅವರು ವಚನಕಾರರು ಆಗಿದ್ದರು. ಬಸವಣ್ಣನವರಿಗೂ ದೇವರ ದಾಸಿಮಯ್ಯ ಅವರಿಗೂ ಯಾವುದೇ ರೀತಿಯ ಜಗಳವಾಗಿರಲಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಡಾ.ಬಿ ವಿ ವಸಂತಕುಮಾರ ತಿಳಿಸಿದರು.
ಹಂಪಿ ವಿವಿಯಲ್ಲಿಂದು ದೇವರ ದಾಸಿಮಯ್ಯ ಅಧ್ಯಯನ ಪೀಠ ಮತ್ತು ಶ್ರೀ ಮುದನೂರು ಮಹಾಸಂಸ್ಥಾನ ಟ್ರಷ್ಟ್ ಇವರ ಸಹಯೋಗದಲ್ಲಿ ನೇಕಾಕಾರಿಕೆ ವೃತ್ತಿ ಮತ್ತು ಸಂಸ್ಕೃತಿ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇಕಾರರು ಮತ್ತು ದೇವರ ದಾಸಿಮಯ್ಯ ಅವರ ಕುರಿತು ತಿಳಿಸಿದರು.
ಬೆಂಗಳೂರು ವಿವಿಯಲ್ಲಿ ಡಾ. ಎನ್ ಚಿದಾನಂದ ಮೂರ್ತಿ ಅವರು ಜೇಡರ ದಾಸಿಮಯ್ಯ,ದೇವರ ದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಅವರು ಬೇರೆ ಬೇರೆ ಎಂದು ಮಂಡನೆ ಮಾಡುತ್ತಾರೆ. ನಾನು ಆ ಮೂರು ಹೆಸರು ಒಂದೇ ಎಂದು ಹೇಳುತ್ತೇನೆ. ಬಸವಣ್ಣನ ಕಾಲಕ್ಕಿಂತಲೂ ಮುಂಚಿತವಾಗಿ ಜೇಡರ ದಾಸಿಮಯ್ಯ ಅವರು ವಚನಗಳನ್ನು ಬರೆದಿದ್ದಾರಂತೆ. ಇಂದು ಲಿಂಗಾತರ ಬೇರೆಯಲ್ಲ, ವೀರ ಶೈವರು ಬೇರೆಯಲ್ಲ. ನಾವೆಲ್ಲ ಒಂದೇ ಎಂಬ ಮನೋಭಾವದವರು. ಯಾರೂ ಬೇರೆಯಲ್ಲ, ಬೇಸರವನ್ನ ಮಾಡಿಕೊಳ್ಳಬಾರದು ಎಂದರು.
ರೈತರು ಮತ್ತು ನೇಕಾರರು ದೇಶದ ಬೆನ್ನೆಲುಬು. ರೈತರು ದೇಶದ ಜನರ ಹೊಟ್ಟೆ ತುಂಬಿಸುತ್ತಾರೆ, ನೇಕಾರರು ಜನರ ಮಾನ ಮುಚ್ಚುತ್ತಾರೆ. ಅನ್ನವನ್ನು ಬಿಟ್ಟು ಮನುಷ್ಯ ಒಂದೆರಡು ದಿನ ಬದುಕುತ್ತಾನೆ. ಆದರೆ, ಬಟ್ಟೆ ಬಿಟ್ಟು ಬದುಕಲಾರ. ಅಂತಹ ನೇಕಾರರು ಇಂದು ಖಾಸಗಿ ಒಡೆತನಕ್ಕೆ ಸಿಕ್ಕು ನಿರುದ್ಯೋಗಿಗಳಾಗಿದ್ಧಾರೆ. ಅವರಿಗೆ ಸರಿಯಾಗಿ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಎಲ್ಲರೂ ಖಾದಿ ಬಳಸಿದರೆ ನೇಕಾರರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.